ಭೋಪಾಲ್: ಟ್ರೆಂಡ್ ಬದಲಾದಂತೆ ಪ್ರೀತಿ (Love) ಮಾಡುವ ವಿಧಾನ ಕೂಡ ಬದಲಾಗ್ತಿದೆ. ಈಗಿನ ಕಾಲದ ಕೆಲವು ಲವ್ ಸ್ಟೋರಿಗಳು ಹೇಗಿರ್ತಾವೆ ಅಂದ್ರೆ ಬೆಳಗ್ಗೆ ವಾಟ್ಸಪ್‌ನಲ್ಲಿ ಪ್ರಪೋಸ್ ಮಾಡಿದ್ರೆ, ಮಧ್ಯಾಹ್ನ ಕೈಕೈ ಹಿಡಿದು ಸುತ್ತಾಡಿಕೊಂಡಿರ್ತಾರೆ, ಸಂಜೆ ಬ್ರೇಕಪ್ ಮಾಡಿಕೊಳ್ಳಾರೆ. ಅದಕ್ಕಾಗಿ ಖತರ್ನಾಕ್ ಪ್ಲ್ಯಾನ್‌ಗಳನ್ನೂ ಮಾಡಿರ್ತಾರೆ. ಒಂದು ವೇಳೆ ಪ್ರೇಯಸಿ ಮದ್ವೆ ಅಂತೇನಾದ್ರೂ ಪೀಡಿಸಿದ್ರೆ ಕಥೆ ಮುಗಿಸಿಯೇ ಬಿಡ್ತಾರೆ. ಪ್ರೀತಿ ವಿಚಾರದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ನಿಜವಾದ ಪ್ರೀತಿ ಹುಡುಕುವಲ್ಲಿ ಯುವ ಮನಸ್ಸುಗಳು ಸೋಲುತ್ತಿವೆ. ಆದ್ರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಯೆಸ್. ಮಧ್ಯಪ್ರದೇಶದ (Madhya Pradesh) ನರಸಿಂಹಪುರ ಜಿಲ್ಲೆಯಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬ ತಾನು ಹಿಂದೆ ಕಲಿತ ಶಾಲೆಯ 26 ವರ್ಷದ ಅತಿಥಿ ಶಿಕ್ಷಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನ ನರಸಿಂಹಪುರ ಜಿಲ್ಲೆಯ ಕೋಟವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸಲೆನ್ಸ್ ಸ್ಕೂಲ್‌ನ ಮಾಜಿ ವಿದ್ಯಾರ್ಥಿ ಸೂರ್ಯಾಂಶ್ ಕೊಚಾರ್ ಅಂತ ಗುರುತಿಸಲಾಗಿದೆ.
ಆರೋಪಿಗೆ ಶಿಕ್ಷಕಿ ಮೇಲೆ ಒನ್ ಸೈಡ್ ಲವ್ ಇತ್ತು ಅಂತ ಹೇಳಲಾಗ್ತಿದೆ, ಆತನ ವಿರುದ್ಧ ದೂರು ನೀಡಿದ್ದರಿಂದ ಕೋಪಗೊಂಡ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ – ತಿಹಾರ್ ಜೈಲಿನಲ್ಲಿದ್ದ ತನ್ನ ಸಂಬಂಧಿ ಬಿಡಿಸೋದಕ್ಕಾಗಿ ರೇಖಾ ಗುಪ್ತಾ ಭೇಟಿಗೆ ಬಂದಿದ್ದ ವ್ಯಕ್ತಿ
ಹೌದು. ಇದೇ ಆಗಸ್ಟ್ 18ರಂದು ಮಧ್ಯಾಹ್ನ 3:30ರ ಆರೋಪಿ ಪೆಟ್ರೋಲ್ ತುಂಬಿದ ಬಾಟಲ್ ತೆಗೆದುಕೊಂಡು ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಆಕೆ ಮಾತನಾಡೋದಕ್ಕೂ ಅವಕಾಶ ಕೊಡದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. 10-15% ನಷ್ಟು ಗಾಯಗಳಾಗಿರುವ ಸಂತ್ರಸ್ತೆಯನ್ನ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಟ್ಟಗಾಯಗಳು ಗಂಭೀರವಾಗಿದ್ದರೂ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂನಿಂದ 1.30 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ರಾಯರ ಏಕಶಿಲಾ ವೃಂದಾವನ ಜಲಾವೃತ
ಈ ಕುರಿತು ಮಾತನಾಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಗುಪ್ತಾ, ಆರೋಪಿ ಮತ್ತು ಶಿಕ್ಷಕಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಸೂರ್ಯಾಂಶ್ ಶಿಕ್ಷಕಿ ಬಗ್ಗೆ ಒನ್ ಸೈಡ್ ಲವ್ ಬೆಳಸಿಕೊಂಡಿದ್ದ. ಆದ್ರೆ ಒಂದೆರಡು ವರ್ಷಗಳ ಹಿಂದೆ ಆರೋಪಿ ವಿದ್ಯಾರ್ಥಿಯನ್ನ ಶಿಕ್ಷಕಿ ಕಲಿಸುತ್ತಿದ್ದ ಶಾಲೆಯಿಂದ ಹೊರಹಾಕಲಾಗಿತ್ತು. ಬಳಿಕ ಆರೋಪಿ ಬೇರೆ ಶಾಲೆಯಲ್ಲಿ ಓದುತ್ತಿದ್ದ. ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿಯು ಶಿಕ್ಷಕಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊತ್ವಾಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?