– ಆ.22ಕ್ಕೆ ಮಂತ್ರಾಲಯದಲ್ಲಿ ಪ್ರಪ್ರಥಮ ಸಮ್ಮೇಳನ
– ರಾಯಚೂರು, ಬಳ್ಳಾರಿ ಗಡಿ ಜಿಲ್ಲೆಗಳನ್ನು ಮರೆತ ಕಸಾಪ ಅಧ್ಯಕ್ಷ
ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ ಪ್ರಪ್ರಥಮ ಬಾರಿಗೆ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿರುವುದು ನಾನಾ ಗೊಂದಲ, ಅಸಮಾಧಾನಗಳನ್ನ ಹುಟ್ಟು ಹಾಕಿದೆ. ಆ. 22 ಕ್ಕೆ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ (Mantralaya) ಪ್ರಪ್ರಥಮ ಸಮ್ಮೇಳನ ನಡೆಸಲು ಸಿದ್ಧತೆ ನಡೆದಿವೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಚಿಕ್ಕಮಗಳೂರು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಜಿಲ್ಲೆಗಳ ಕಡೆಗಣನೆ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಕನಿಷ್ಠ ಸಮ್ಮೇಳನದ ಮಾಹಿತಿಯನ್ನು ನೀಡದೇ ಇರುವುದು ಸಾಹಿತ್ಯ ಆಸಕ್ತರು, ರಾಯಚೂರು, ಬಳ್ಳಾರಿ ಜಿಲ್ಲಾ ತಾಲೂಕು ಘಟಕಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್ – ಭರತ್ ಶೆಟ್ಟಿ ಬಾಂಬ್
ಮಂತ್ರಾಲಯಕ್ಕೆ ಹೊಂದಿಕೊಂಡಂತೆ ಇರುವ ರಾಯಚೂರು, ಬಳ್ಳಾರಿ ಜಿಲ್ಲೆಗಳನ್ನ ಕನಿಷ್ಠ ಗಣನೆಗೂ ತೆಗೆದುಕೊಳ್ಳದೆ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ನಡೆಯು ಗಡಿನಾಡು ಜಿಲ್ಲೆಗಳ ಸಾಹಿತ್ಯಾಸಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಜೊತೆಗೆ ಚಿಕ್ಕಮಗಳೂರು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ಮತ್ತೊಂದು ಪ್ರಶ್ನೆ, ಗೊಂದಲ ಹುಟ್ಟು ಹಾಕಿದೆ. ಎಲ್ಲಿಯ ಮಂತ್ರಾಲಯ, ಎಲ್ಲಿಯ ಚಿಕ್ಕಮಗಳೂರು ಅನ್ನೋ ಪ್ರಶ್ನೆ ಮೂಡಿದೆ. ಬಳ್ಳಾರಿ, ರಾಯಚೂರು ಗಡಿನಾಡು ಜಿಲ್ಲೆಗಳಲ್ಲಿ ಸಾಕಷ್ಟು ಭಾಷಾ ಸಮಸ್ಯೆಗಳು ಇರುವಾಗ, ಗಡಿನಾಡು ಕನ್ನಡಿಗರ ಕುರಿತ ಚರ್ಚೆಗಾದರೂ ಜಿಲ್ಲೆಗಳನ್ನ ಪರಿಗಣಿಸಬೇಕಿತ್ತು ಅಂತ ಅಸಮಾಧಾನ ಕೇಳಿ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್ ರಿಯಾಕ್ಷನ್
ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೆ ರಾಯಚೂರು, ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷರ ಹೆಸರು ಮುದ್ರಿಸಿರುವುದು ಬಿಟ್ಟರೆ ಬೇರೆ ಯಾವ ಹೆಸರುಗಳು ಕಾಣಸಿಗುವುದಿಲ್ಲ. ಕನಿಷ್ಠ ಗಡಿ ಜಿಲ್ಲೆಗಳಿಂದ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ಬರಲಿ ಅಂತಾದ್ರೂ ಆಹ್ವಾನ ನೀಡದಿರುವುದು ವಿಪರ್ಯಾಸ. ಅಷ್ಟೇ ಅಲ್ಲಾ ಪಕ್ಕದ ಮಂತ್ರಾಲಯದಲ್ಲಿ ಪ್ರಪ್ರಥಮ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರು ಕನ್ನಡ ಅಭಿಮಾನಿಗಳಿಗೆ, ಸಾಹಿತ್ಯಾಸಕ್ತರಿಗೆ ಮಾಹಿತಿಯಿಲ್ಲ.
ಡಾ.ಪ್ರದೀಪ್ ಕುಮಾರ್ ಹೆಬ್ರಿ ಸಮ್ಮೇಳನಾಧ್ಯಕ್ಷರಾಗಿದ್ದು, ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅಯೋಧ್ಯ ರಾಮಲಲ್ಲಾ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಸೇರಿ ಹಲವು ಸಾಧಕರಿಗೆ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಚಿಕ್ಕಮಗಳೂರು ಸೇರಿ ವಿವಿಧೆಡೆಯ ಸಾಹಿತಿಗಳು, ಕವಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.