ನವದೆಹಲಿ: 12 ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲೇ ಕಳೆಯೋದಾದರೆ ಜನ ಏಕೆ ಟೋಲ್ (Toll) ಪಾವತಿಸಬೇಕು ಅಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಗರಂ ಆಗಿದೆ.
ತ್ರಿಶೂರಿನ ಪಾಲಿಯೆಕ್ಕರಾ ಟೋಲ್ ಸ್ಥಗಿತಕ್ಕೆ ಕೇರಳ ಹೈಕೋರ್ಟ್ (Kerala High Court) ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಎನ್‌ಹೆಚ್‌ಎಐ ಹಾಗೂ ಗುರುವಾಯೂರು ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಮನೆ ಬಿಟ್ಟು ಈ ತುದಿಯಿಂದ ಆ ತುದಿಯ ರಸ್ತೆಗೆ ಹೋಗಲು 12 ಗಂಟೆ ಬೇಕಾಗೋದಾದರೆ ಟೋಲ್ ರೋಡ್ ಏಕೆ ಬೇಕು? 1 ಗಂಟೆಯ ಪ್ರಯಾಣ 11 ಗಂಟೆ ಹೆಚ್ಚುವರಿಯಾದರೆ ಯಾರು ಹೊಣೆ? ಇದಕ್ಕಾಗಿ ಏಕೆ 150 ರೂ. ಟೋಲ್ ಕಟ್ಟಬೇಕು ಅಂತ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ
ಎನ್‌ಹೆಚ್‌ಎಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಾರಿ ಅಚಾನಕ್ ಆಗಿ ಅಪಘಾತಕ್ಕೀಡಾಗಿ ಟ್ರಾಫಿಕ್ ಜಾಮ್ (Traffic Jam) ಆಗಿದ್ದು ‘ದೇವರ ಆಟ’. ಸರ್ವಿಸ್ ರೋಡ್ ಇದೆ. ಆದರೆ ಮಳೆಯೂ ಜೋರಾಗಿದ್ದು, ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್‌ಗೆ ಕಾರಣ ಅಂದರು. ಇದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿ, ಅದು ದೇವರ ಆಟ ಅಲ್ಲ, ಕಳಪೆ ನಿರ್ವಹಣೆಯಿಂದ ಸೃಷ್ಟಿಯಾದ ಗುಂಡಿ’ ಅಂತ ಗರಂ ಆಯ್ತು. ಅಲ್ಲದೇ ಕೇಸ್ ಆದೇಶವನ್ನು ಕಾಯ್ದಿರಿಸಿತು. ಇದನ್ನೂ ಓದಿ: 97 LCA ಮಾರ್ಕ್ 1A ಫೈಟರ್ ಜೆಟ್ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ