– ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಟ್ವಿಸ್ಟ್; ರಿಪ್ಪನ್‌ಪೇಟೆಯ ವ್ಯಕ್ತಿಯ ಜೊತೆ ವಾಸವಿದ್ದ ಸುಜಾತಾ ಭಟ್?
– ನೆರೆಹೊರೆಯವರು ಹೇಳಿದ್ದೇನು?
ಶಿವಮೊಗ್ಗ: ಧರ್ಮಸ್ಥಳದ ಅನನ್ಯಾ ಭಟ್ ಪ್ರಕರಣ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್‌ಪೇಟೆಗೂ ಲಿಂಕ್ ಇರುವ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣ (Dharmasthala Mass Burial Case) ಎಸ್‌ಐಟಿ ಕಾರ್ಯಾಚರಣೆಯ ಶೋಧದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಈ ನಡುವೆ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ತಾಯಿ ಸುಜಾತಾ ಭಟ್ (Sujatha Bhat) ಎಸ್‌ಐಟಿಗೆ ದೂರು ನೀಡಿದ್ದರು. ಅದರೆ, ಸುಜಾತಾ ಭಟ್ ಶಿವಮೊಗ್ಗದಲ್ಲಿಯೂ ಕೆಲ ವರ್ಷ ವಾಸವಾಗಿದ್ದರು. ಈ ವೇಳೆ ಸುಜಾತಾ ಭಟ್ ಪುತ್ರಿ ಅನನ್ಯಾ ಭಟ್ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ಇದ್ದಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
1999 ರಿಂದ 2007 ರವರೆಗೆ ರಿಪ್ಪನ್ ಪೇಟೆಯಲ್ಲಿ ವಾಸವಿದ್ದ ಪ್ರಭಾಕರ್ ಬಾಳಿಗ ಅವರ ಜೊತೆ ಸುಜಾತಾ ಭಟ್ 18 ವರ್ಷವಾಸವಿದ್ದರು. ದಂಪತಿ, ನಾಯಿಗಳನ್ನು ಮಕ್ಕಳು ಎಂದು ಸಾಕುತ್ತಿದ್ದರು. ಸ್ಥಳೀಯರ ಪ್ರಕಾರ, ಸುಜಾತಾ ಭಟ್ ಹಾಗೂ ಪ್ರಭಾಕರ್ ಬಾಳಿಗ ಅವರಿಗೆ ಮಕ್ಕಳೇ ಇರಲಿಲ್ಲವಂತೆ. ಅಲ್ಲದೆ, ಸುಜಾತಾ ಇರುವಷ್ಟು ದಿನ ಅಕ್ಕಪಕ್ಕದ ಜನರೊಂದಿಗೆ ಹಾಗೂ ಬ್ರಾಹ್ಮಣ ಸಮಾಜ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿಲ್ಲ.
ಸುಜಾತಾ ಅವರು ಲಿವಿಂಗ್-ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ನಾವು ಮಾತ್ರ ಸುಜಾತಾ ಭಟ್ ಅವರಿಗೆ ಮಗಳು ಇರುವುದನ್ನು ನೋಡಿಲ್ಲವೆನ್ನುತ್ತಾರೆ ನೆರೆಹೊರೆಯವರಾದ ಹರೀಶ್ ಪ್ರಭು. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್ ಸೆಂಥಿಲ್: ಜನಾರ್ದನ ರೆಡ್ಡಿ
ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗೆದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿರುವ ಅಂಶ ಒಂದೆಡೆಯಾದರೆ. ಇತ್ತ ನಾಪತ್ತೆಯಾದವರ ಬಗ್ಗೆ ಎಸ್‌ಐಟಿಗೆ ದೂರು ನೀಡಿದವರ ಬಗ್ಗೆ ಬಗೆದಷ್ಟು ಅಂಶಗಳು ಬಯಲಾಗುತ್ತಿವೆ.