ಬೆಂಗಳೂರು: ನಿಗದಿ ಪಡಿಸಿ ಸಮಯದಲ್ಲಿ ಕಲಬುರಗಿಯಲ್ಲಿ (Kalaburagi) ಜವಳಿ ಪಾರ್ಕ್ ನಿರ್ಮಾಣ ಆಗುತ್ತದೆ ಅಂತ ಜವಳಿ ಸಚಿವ ಶಿವಾನಂದ ಪಾಟೀಲ್ (Shivanand Patil) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಜಗದೇವ್ ಗುತ್ತೇದಾರ್ ಪ್ರಶ್ನೆ ಕೇಳಿದ್ದರು. ಕಲಬುರಗಿಯಲ್ಲಿ ಜವಳಿ ಪಾರ್ಕ್ (Textile Park) ಯಾವಾಗ ಪ್ರಾರಂಭ ಮಾಡ್ತೀರಾ? ಪಾರ್ಕ್ಗೆ 1 ಸಾವಿರ ಎಕ್ರೆ ವಶಪಡಿಸಿಕೊಳ್ಳಲಾಗಿದೆ. ಇದರಿಂದ ರೈತರು ಬೇರೆ ರಾಜ್ಯಕ್ಕೆ ವಲಸೆ ಹೋಗ್ತಿದ್ದಾರೆ. ಇದನ್ನ ಸರ್ಕಾರ ತಡೆಯಬೇಕು ಎಂದಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಆರೋಪ; ಆಯೋಗದ ಕ್ರಮವನ್ನು ಸದನ ಖಂಡಿಸಬೇಕು: ಬಿ.ಕೆ ಹರಿಪ್ರಸಾದ್
ಇದಕ್ಕೆ ಸಚಿವ ಶಿವಾನಂದ ಪಾಟೀಲ್ ಉತ್ತರ ನೀಡಿ, ಪಿಎಂ ಮಿತ್ರ ಪಾರ್ಕ್ ದೇಶದಲ್ಲಿ 7 ಕಡೆ ಅನುಮತಿ ಕೊಡಲಾಗಿದೆ. ಕರ್ನಾಟಕಕ್ಕೆ ಇದು ಸಿಕ್ಕಿರೋದು ಸುದೈವ. ಪಿಎಂ ಮಿತ್ರ ಪಾರ್ಕ್ ಮಾಡೋಕೆ ಸುಮಾರು 7ರಿಂದ 10 ವರ್ಷ ಬೇಕು. ಈ ಪಾರ್ಕ್ ಮಾಡಲು 3 ಸಾವಿರ ಎಕ್ರೆ ಬೇಕು. ಈಗ 1 ಸಾವಿರ ಭೂಮಿ ವಶಪಡಿಸಿಕೊಳ್ಳಲಾಗಿದೆ. ಈ ಜವಳಿ ಪಾರ್ಕ್ ಬಂದರೆ 1 ಲಕ್ಷ ಉದ್ಯೋಗ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯ ತೋಟಗಾರಿಕೆ ವಿವಿ ಮುಚ್ಚೋದಿಲ್ಲ- ಚೆಲುವರಾಯಸ್ವಾಮಿ
ಕೇಂದ್ರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಮ್ಮ ಸರ್ಕಾರದಿಂದ ಜವಳಿ ಪಾರ್ಕ್ಗೆ 390 ಕೋಟಿ ರೂ. ಹಣ ಮೀಸಲು ಇಡಲಾಗಿದೆ. ಕೇಂದ್ರದ ಹಣ ಸಹಾಯದಿಂದ ಕಾಲಕ್ಕೆ ಸರಿಯಾಗಿ ಪಾರ್ಕ್ ನಿರ್ಮಾಣದ ಕೆಲಸ ಆಗಲಿದೆ. ರೈತರು ಗುಳೆ ಹೋಗೊದನ್ನ ತಡೆಯಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.