ಬೆಂಗಳೂರು: ಇಂದು ಮೂರು ಜಿಲ್ಲೆಗೆ ರೆಡ್ ಅಲರ್ಟ್, ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಬೆಳಗಾವಿ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ (Red Alert) ಘೋಷಣೆಯಾಗಿದ್ದರೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ಹಾಸನದ ಕೆಲವು ತಾಲೂಕಿನ, ಉಡುಪಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಉಳಿದ ಎಲ್ಲಾ ಜಿಲ್ಲೆಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಗಾಳಿಯ ವೇಗ ಗಂಟೆಗೆ 40-50ಕಿ.ಮೀ ಇರಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
“Locations with 100+ mm #Rainfall in #Karnataka from 08:30AM on 18.08.2025 to 08:00AM on 19.08.2025 are listed below.”#KSNDMC #KarnatakaRains #SWM2025 #southwestmonsoon2025 pic.twitter.com/w6MaLV6XKz
— Karnataka State Natural Disaster Monitoring Centre (@KarnatakaSNDMC) August 19, 2025
ರೆಡ್ ಅಲರ್ಟ್:
ಇದು ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದ್ದು, ಜೀವ ಮತ್ತು ಆಸ್ತಿಗೆ ಗಮನಾರ್ಹ ಅಪಾಯವನ್ನುಂಟುಮಾಡುವ ಸಾಧ್ಯತೆ ಇರುತ್ತದೆ. ಅಪಾಯಗಳನ್ನು ತಗ್ಗಿಸಲು ಜನರು ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರೆಡ್ ಅಲರ್ಟ್ ಘೋಷಣೆಯಾದರೆ 24 ಗಂಟೆಗಳ ಅವಧಿಯಲ್ಲಿ 204.5 ಮಿ.ಮೀ. ಮೀರಿದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆ – ಬೆಳಗಾವಿಯಲ್ಲಿ 8 ಸೇತುವೆ ಜಲಾವೃತ
ಆರೆಂಜ್ ಅಲರ್ಟ್:
ರೆಡ್ ಅಲರ್ಟ್‌ನಲ್ಲಿ ಘೋಷಣೆಯಾದಷ್ಟು ಜಾಸ್ತಿ ಅಪಾಯ ಆಗದೇ ಇದ್ದರೂ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಅಲರ್ಟ್ ಘೋಷಣೆಯಾದ ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 115.6-204.4 ಮಿ.ಮೀ. ನಡುವೆ ಮಳೆಯಾಗುವ ಸಂಭವವಿದೆ.
ಯೆಲ್ಲೂ ಅಲರ್ಟ್:
ರೆಡ್ ಮತ್ತು ಆರೆಂಜ್ ಅಲರ್ಟ್‌ನಲ್ಲಿ ಆಗುವಷ್ಟು ಮಳೆ ಬೀಳದೇ ಇದ್ದರೂ ದೈನಂದಿನ ದಿನಚರಿಗಳಿಗೆ ಕೆಲವು ಅಡಚಣೆಗಳನ್ನು ಉಂಟು ಮಾಡಬಹುದು. ಮುಂದಿನ 24 ಗಂಟೆಯಲ್ಲಿ 64.5–115.5 ಮಿ.ಮೀ. ಮಳೆ ಬೀಳುವ ಸಾಧ್ಯತೆಯಿದೆ.