– ಕೆಲವು ರೈಲುಗಳ ಬದಲಾವಣೆ
ಬೆಂಗಳೂರು: ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ.
ಆಗಸ್ಟ್ 23ರಂದು, ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ. ಆಗಸ್ಟ್ 24ರಂದು ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269), ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226), ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (16225), ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56267), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56268), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56266) ಮತ್ತು ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56265) ರೈಲುಗಳು ಒಂದು ದಿನ ರದ್ದುಗೊಳ್ಳಲಿವೆ.
ಆಗಸ್ಟ್ 24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.
ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣವಿರುತ್ತದೆ. ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 18112 ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್, 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಮತ್ತು 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಮಾರ್ಗಮಧ್ಯೆ 60-75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.