– ಸಿಎಂ ವಿರುದ್ಧ 24 ಕೊಲೆ ಆರೋಪ – ಎಸ್‌ಐಟಿ ರಚಿಸಲು ಅಶೋಕ್ ಆಗ್ರಹ
– ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್
– ಯೂಟ್ಯೂಬರ್ಸ್ ವಿರುದ್ಧ ಕ್ರಮ ಏಕಿಲ್ಲ? – ವಿಜಯೇಂದ್ರ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ (Investigation) ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ.
ಪರಮೇಶ್ವರ್ ಉತ್ತರ ಕೊಡಲಿ; ವಿಜಯೇಂದ್ರ
ವಿಧಾನಸೌಧ ಮುಂಭಾಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ (BY Vijayendra), ನಿನ್ನೆ ನಮ್ಮ ಪಕ್ಷದ ಹಿರಿಯರ ನೇತ್ರತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥ್‌ನ ದರ್ಶನ ಪಡೆದಿದ್ವಿ. ವೀರೇಂದ್ರ ಹೆಗಡೆ ಅವರನ್ನೂ ಸಹ ನಾವು ಭೇಟಿ ಮಾಡಿದ್ದೇವೆ. ಅಪಪ್ರಚಾರಕ್ಕೆ ಕಡಿವಾಣ ಹಾಕಲು ಯಾಕೆ ಸರ್ಕಾರ ಪ್ರಯತ್ನ ಮಾಡಿಲ್ಲ? ಇದರ ಬಗ್ಗೆ ಪರಮೇಶ್ವರ್ (Parameshwar) ಅವರು ಉತ್ತರ ಕೊಡಬೇಕು. SIT ತನಿಖೆಯ ಮಧ್ಯಂತರ ವರದಿಯನ್ನ ಕೊಡಬೇಕು. ಪರಮೇಶ್ವರ್ ಸಮಗ್ರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ
ಡಿಕೆಶಿಗೆ ಮತ್ಯಾವ ಸಮಯ ಬೇಕು?
ಡಿಕೆ ಶಿವಕುಮಾರ್ ಅವರೇ ಷಡ್ಯಂತ್ರ ಅಂತ ಹೇಳಿದ್ರು, ಸಮಯ ಬಂದಾಗ ಹೇಳ್ತೇನೆ ಅಂದಿದ್ರು. ಡಿಕೆ ಶಿವಕುಮಾರ್ ಅವರಿಗೆ ಮತ್ಯಾವ ಸಮಯ ಬರಬೇಕು? ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು.. ನಮ್ಮ ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಾರೆ. ಆದ್ರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಏಕಿಲ್ಲ? ಎಡಪಂಥೀಯರ ಒತ್ತಡದ ಬಗ್ಗೆ ದಿನೇಶ್ ಗುಂಡೂರಾವ್ ಹೇಳ್ತಾರೆ. ಅದರ ಹಿಂದಿರುವವರ ಬಗ್ಗೆ ಹೇಳಬೇಕು. ಯೂಟ್ಯೂಬರ್ಸ್ ಮೇಲೆ ಯಾಕೆ ಕ್ರಮವಿಲ್ಲ? ಅನ್ನೊದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ
24 ಕೊಲೆ ಆರೋಪಕ್ಕೂ ಎಸ್‌ಐಟಿ ರಚಿಸಿ: ಅಶೋಕ್
ಇನ್ನೂ ವಿಪಕ್ಷ ನಾಯಕ ಆರ್. ಅಶೋಕ್ ಮಾತಮಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವ ಸಿಎಂ ವಿರುದ್ಧವೂ ಆರೋಪ ಮಾಡಿದ್ದಾನೆ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಅಂತ ರಾಜ್ಯದ ಮುಖ್ಯಮಂತ್ರಿಗಳನ್ನ ತಿಮ್ಮರೋಡಿ ಅವಮಾನ ಮಾಡಿದ್ದಾರೆ. 24 ಕೊಲೆಗಳ ಆರೋಪಕ್ಕೂ ಎಸ್‌ಐಟಿ ರಚಿಸಿ ತನಿಖೆ ಮಾಡಿಸಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ
ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್
ಎಂಎಲ್‌ಸಿ ಎನ್. ರವಿಕುಮಾರ್ ಮಾತನಾಡಿ, ಧರ್ಮಸ್ಥಳದ ಪ್ರಕರಣದಲ್ಲಿ ಕೂಡಲೇ ಮುಸುಕುಧಾರಿಯನ್ನ ಬಂಧನ ಮಾಡಬೇಕು. ಅವನಿಗೆ ಮಂಪರು ಪರೀಕ್ಷೆಗೆ ಒಳ ಪಡಿಸಬೇಕು. ಬಿಜೆಪಿ ಜನಾಂದೋಲನ ಹೋರಾಟವಾಗಿ ಇದನ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ – ಓರ್ವ ಪೊಲೀಸ್ ಸಾವು, ಮೂವರಿಗೆ ಗಾಯ