ಬ್ರೊಕೊಲಿಯಲ್ಲಿ ಯತೇಚ್ಛವಾದ ಪೋಷಕಾಂಶಗಳು ಇರುತ್ತವೆ. ಫೈಬರ್, ವಿಟಮಿನ್‌ಗಳು ಇರುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಠಿಕ ಆಹಾರ ದೊರೆತಂತಾಗುತ್ತದೆ. ಇದರಲ್ಲಿ ನಾನಾ ಬಗೆಯ ಖಾದ್ಯಗಳನ್ನು ಮಾಡಬಹುದು. ಅದೇ ರೀತಿ ಸಲಾಡ್ ಸಹ ಮಾಡಬಹುದು. ಬ್ರೊಕೋಲಿಯಲ್ಲಿ ಸಲಾಡ್ ಮಾಡಿ ನೋಡಿ..!
ಬೇಕಾಗುವ ಪದಾರ್ಥಗಳು
ಬ್ರೊಕೊಲಿ- ½ ಬಟ್ಟಲು
ಆಲೂಗಡ್ಡೆ- ಬೇಯಿಸಿದ್ದು ಸ್ವಲ್ಪ
ಹುರಿದ ಕಡಲೆಕಾಯಿ ಬೀಜ ಅಥವಾ ಬಾದಾಮಿ- 2 ಚಮಚ
ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
ಚೀಸ್- 2 ಚಮಚ
ಕಾಳು ಮೆಣಸಿನ ಪುಡಿ- ¼ ಚಮಚ
ಪುದೀನಾ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ನಿಂಬೆ ರಸ- 1 ಚಮಚ
ಮೇಯನೇಸ್- 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಬ್ರೊಕೋಲಿಯನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಕತ್ತರಿಸಿ ಬ್ರೊಕೋಲಿಯನ್ನು ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ನೀರನ್ನು ಬಸಿದುಕೊಳ್ಳಿ. ನಂತರ ಬೇಯಿಸಿದ ಬ್ರೊಕೋಲಿಗೆ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಕರವಾದ ಆರೋಗ್ಯಕರ ಬ್ರೊಕೋಲಿ ಸಲಾಡ್ ಸವಿಯಲು ಸಿದ್ಧ.