ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ರಾಗಿ ಮುದ್ದೆ, ಚಪಾತಿ ಕೊಡ್ತೇವೆ ಅಂತ ಬಿಬಿಎಂಪಿ (BBMP) ಘೋಷಣೆ ಮಾಡಿತ್ತು. ಘೋಷಣೆ ಮಾಡಿ ವರ್ಷ ಆದರೂ ಇನ್ನೂ ಬಿಬಿಎಂಪಿಯ ಕೆಲ ವಲಯಗಳಲ್ಲಿ ರಾಗಿ ಮುದ್ದೆ, ಚಪಾತಿ ವಿತರಣೆ ಮಾಡಿಯೇ ಇಲ್ಲ.
ಈ ನಡುವೆ ಹೊಸದಾಗಿ 54 ಇಂದಿರಾ ಕ್ಯಾಂಟಿನ್ ಮಾಡ್ತೆವೆ ಅಂತಾ ಸರ್ಕಾರ ಹೇಳ್ತಿದೆ. ಆದರೆ ಇಲ್ಲಿ ಹೊಸ ಮೆನು ಘೋಷಣೆ ಮಾಡಿ ವಿತರಣೆ ಆಗ್ತಿಲ್ಲ. ರಾಗಿಮುದ್ದೆ, ಚಪಾತಿ ಕೊಡಿ ಅಂತಾ ಸಾರ್ವಜನಿಕರು ಅಗ್ರಹಿಸುತ್ತಾ ಇದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ – ಶ್ರೀಕ್ಷೇತ್ರ ದೇವಸ್ಥಾನಕ್ಕೆ ಇಂದು ವಿಜಯೇಂದ್ರ & ಟೀಂ
ಸಿದ್ದರಾಮಯ್ಯ (Siddaramaiah) ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟಿನ್. ಬಡವರಿಗೆ ತುಂಬಾ ಅನುಕೂಲ ಆಗ್ತಿರುವ ಯೋಜನೆ ಇದು. ಇಂದಿರಾ ಕ್ಯಾಂಟಿನ್‌ನಲ್ಲಿ ಮೆನು ಬದಲಾವಣೆ ಮಾಡಿ ರಾಗಿ ಮುದ್ದೆ , ಚಪಾತಿ ನೀಡೋದಾಗಿ ಬಿಬಿಎಂಪಿ ಹೇಳಿತ್ತು. ಹೇಳಿ ಒಂದು ವರ್ಷ ಕಳೆದ್ರೂ ಬಿಬಿಎಂಪಿ ಪಶ್ಚಿಮ ವಲಯದ ಹಲವು ಇನ್ನೂ ರಾಗಿ ಮುದ್ದೆ ಮತ್ತು ಚಪಾತಿ ವಿತರಣೆ ಇಲ್ಲ. ಬರೀ ಅನ್ನ ಸಾಂಬಾರ್ ವಿತರಣೆ ಮಾಡ್ತಾ ಇದ್ದಾರೆ. ಇದನ್ನೂ ಓದಿ: ಅಣುಬಾಂಬ್ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್ ಸಂತೋಷ್
ಇನ್ನೂ ಮತ್ತೆ ಹೊಸದಾಗಿ 54 ಇಂದಿರಾ ಕ್ಯಾಂಟಿನ್ ಓಪನ್ ಮಾಡೋದಾಗಿ ಸರ್ಕಾರ ಹೇಳ್ತಿದೆ. ಆದ್ರೆ ಇಂದಿರಾ ಕ್ಯಾಂಟಿನ್ ಮೆನು ಬದಲಾವಣೆ ಘೋಷಣೆ ಮಾಡಿ ಹೊಸ ಮೆನು ಕೆಲ ವಲಯಗಳಲ್ಲಿ ವಿತರಣೆ ಆಗ್ತಿಲ್ಲ. ಇದಕ್ಕೆ ಟೆಂಡರ್ ಸಮಸ್ಯೆ ಎನ್ನಲಾಗ್ತಿದೆ. ಮೆಜೆಸ್ಟಿಕ್ ಇಂದಿರಾ ಕ್ಯಾಂಟಿನ್‌ನಲ್ಲಿ ಅತಿ ಹೆಚ್ಚು ಊಟ ವಿತರಣೆ ಆಗುತ್ತೆ. ಚಪಾತಿ, ರಾಗಿ ಮುದ್ದೆ ವಿತರಣೆಗೆ ಆಗ್ರಹಿಸುತ್ತಾ ಇದ್ದಾರೆ.
ಸರ್ಕಾರ ಸಂಬಂಧ ಪಟ್ಟ ಇಲಾಖೆಗಳಿಗೆ ಇಂದಿರಾ ಕ್ಯಾಂಟಿನ್ ಹೊಸ ಮೆನು ಜಾರಿಗೆ ಸೂಚಿಸಬೇಕಿದೆ. ಇಲ್ಲದೇ ಹೋದಲ್ಲಿ ಸಮಸ್ಯೆ ಆಗಲಿದೆ. ಶೀಘ್ರದಲ್ಲೇ ರಾಗಿಮುದ್ದೆ, ಚಪಾತಿ ವಿತರಣೆ ಆಗುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರಶೇಖರ ಸ್ವಾಮೀಜಿ ಭೈರವೈಕ್ಯ – ನಾಥ ಸಂಪ್ರದಾಯದಂತೆ ನೆರವೇರಿದ ಅಂತ್ಯ ಸಂಸ್ಕಾರ