ರಾಮನಗರ: ಶ್ರಾವಣ ಶನಿವಾರ (Shravan Saturday) ಹಿನ್ನೆಲೆ ರಾಮನಗರದ (Ramanagara) ರಾಮದೇವರ ಬೆಟ್ಟಕ್ಕೆ (Ramadevara Betta) ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಮದೇವರ ಬೆಟ್ಟ ಹತ್ತಿ ಪಟ್ಟಾಭಿರಾಮನ ದರ್ಶನ ಪಡೆದು ಶ್ರಾವಣ ಶನಿವಾರದ ವಿಶೇಷ ಪೂಜೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲ ಬಾರಿಗೆ ರಾಮದೇವರ ಬೆಟ್ಟಕ್ಕೆ ಬಂದಿದ್ದೇನೆ. ಪ್ರಕೃತಿ ನಡುವೆಯಿರುವ ಪಟ್ಟಾಭಿರಾಮನ ವಿಶೇಷ ದೇವಾಲಯ ಇದು. ಸುಗ್ರೀವ ಈ ದೇವಾಲಯ ನಿರ್ಮಾಣ ಮಾಡಿದ ಇತಿಹಾಸ ಇದೆ. ಇಂದು ಸ್ಥಳೀಯ ಮುಖಂಡರು ಆಹ್ವಾನಿಸಿದ ಹಿನ್ನೆಲೆ ಭೇಟಿ ನೀಡಿದ್ದೇನೆ ಎಂದರು. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?
ಈ ದೇವಾಲಯ ಮತ್ತಷ್ಟು ಅಭಿವೃದ್ಧಿ ಆಗಬೇಕು, ಮೂಲಭೂತ ಸೌಕರ್ಯಗಳು ಬೇಕು. ಮುಂದೆ 2028ಕ್ಕೆ ಶ್ರೀರಾಮನ ಆಶೀರ್ವಾದದಿಂದ ಬಹುಮತದೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದಮೇಲೆ ಈ ದೇವಾಲಯ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ವಶ – ಮನನೊಂದು ಮಹಿಳೆ ಆತ್ಮಹತ್ಯೆ