ವಿಜಯಪುರ: ಮಹಾರಾಷ್ಟ್ರದ ಭಾಗದಲ್ಲಿ ಆದ ಮಳೆಯಿಂದಾಗಿ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ (Krishna River) ತುಂಬಿ ಹರಿಯುತ್ತಿದ್ದು, ಆಲಮಟ್ಟಿ ಜಲಾಶಯ (Almatti Dam) ಸಂಪೂರ್ಣ ಭರ್ತಿಯಾಗಿದೆ.
ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಜಲಾಶಯ ಒಟ್ಟು 123 ಟಿಎಂಸಿ ಸಂಗ್ರಹಣ ಸಾಮಥ್ರ್ಯ ಹೊಂದಿದೆ. 123 ಟಿಎಂಸಿ ನೀರು ಸಂಗ್ರಹವಾಗಿದ್ದು, 30,000 ಕ್ಯೂಸೆಕ್ ಒಳಹರಿವು ಹಾಗೂ 30,000 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಇದರಿಂದ ಜಿಲ್ಲೆಯ ರೈತರಲ್ಲಿ ಸಂಭ್ರಮ ಮನೆಮಾಡಿದೆ. ಇದನ್ನೂ ಓದಿ: ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ `ಮಹಾ’ ಸಿಎಂ ಆಕ್ಷೇಪ – ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸಲು ಕೇಂದ್ರಕ್ಕೆ ಡಿಕೆಶಿ ಮನವಿ
ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಎತ್ತರ – 519.60 ಮೀಟರ್
ನೀರು ಸಂಗ್ರಹ ಸಾಮಥ್ರ್ಯ – 123.081 ಟಿಎಂಸಿ
ಪ್ರಸ್ತುತ ನೀರು ಸಂಗ್ರಹ – 123 ಟಿಎಂಸಿ
ಒಳಹರಿವು – 30,000 ಕ್ಯೂಸೆಕ್
ಹೊರ ಹರಿವು – 30,000 ಕ್ಯೂಸೆಕ್