ನವದೆಹಲಿ: ಇಡೀ ದೇಶ ಇಂದು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಕೆಂಪು ಕೋಟೆಯಲ್ಲಿ (Red Fort) ಸತತ 12ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು, ದೇಶವನ್ನುದ್ದೇಶಿಸಿ ಮ್ಯಾರಥಾನ್ ಭಾಷಣ ಮಾಡಿದ್ದಾರೆ.
Addressing the nation on Independence Day. https://t.co/rsFUG7q6eP
— Narendra Modi (@narendramodi) August 15, 2025
ಕೆಂಪು ಕೋಟೆಯಲ್ಲಿ 103 ನಿಮಿಷಗಳ ಕಾಲ ಸುದೀರ್ಘ ಭಾಷಣ (longest Speech) ಮಾಡಿದ ಮೋದಿ ಹಲವು ದಾಖಲೆಗಳನ್ನ ಮುರಿದರು. ಸತತ 12ನೇ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದು, ಈ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. 1966ರ ಜನವರಿಯಿಂದ 1977ರ ಮಾರ್ಚ್ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್ ವರೆಗೆ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿ (Indira Gandhi) ಅವರು, ಒಟ್ಟು 16 ಬಾರಿ ಹಾಗೂ ಸತತ 11 ಸಲ ಆಗಸ್ಟ್ 15ರಂದು ಧ್ವಜಾರೋಹಣ ಭಾಷಣ ಮಾಡಿದ್ದರು. ಇದೀಗ ಸತತ 12ನೇ ಭಾಷಣ ಮಾಡಿರುವ ಪ್ರಧಾನಿ ಮೋದಿ ಅವರು, ಸತತ 17 ಬಾರಿ (1947–63) ಧ್ವಜಾರೋಹಣ ಭಾಷಣ ಮಾಡಿದ ನೆಹರೂ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ರೈತರ ಕಾವಲಿಗೆ ನಾನು ತಡೆ ಗೋಡೆಯಂತೆ ನಿಂತಿದ್ದೇನೆ – ಕೆಂಪು ಕೋಟೆಯಿಂದ ಟ್ರಂಪ್‌ಗೆ ಮೋದಿ ಖಡಕ್ ಸಂದೇಶ
ಮೋದಿ: ಯಾವ ವರ್ಷ ಎಷ್ಟು ನಿಮಿಷ ಭಾಷಣ?
2025 – 103 ನಿಮಿಷ
2024 – 98 ನಿಮಿಷ
2023 – 90 ನಿಮಿಷ
2022 – 83 ನಿಮಿಷ
2021 – 88 ನಿಮಿಷ
2020 – 90 ನಿಮಿಷ
2019 – 92 ನಿಮಿಷ
2018 – 83 ನಿಮಿಷ
2017 – 56 ನಿಮಿಷ
2016 – 94 ನಿಮಿಷ
2015 – 88 ನಿಮಿಷ
2014 – 64 ನಿಮಿಷ
ಮೊದಲಿಗೆ 103 ನಿಮಿಷಗಳ ಕಾಲ ಭಾಷಣ, ಮೋದಿಯವರ ಅತಿ ದೊಡ್ಡ ಸ್ವಾತಂತ್ರ್ಯ ದಿನಾಚರಣೆಯ ಭಾಷಣವಾಗಿದ್ದು, ಕಳೆದ ವರ್ಷ ಅವರೇ ಮಾಡಿದ್ದ 98 ನಿಮಿಷಗಳ ಭಾಷಣದ ದಾಖಲೆಯನ್ನ ಹಿಂದಿಕ್ಕಿತು. 2014ರಲ್ಲಿ 64 ನಿಮಿಷಗಳ ಕಾಲ ಭಾಷಣ ಮಾಡಿದ್ದ ಪ್ರಧಾನಿ ಮೋದಿ 2015ರಲ್ಲಿ 88 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ 1947ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 72 ನಿಮಿಷಗಳ ಭಾಷಣದ ದಾಖಲೆ ಮುರಿದಿದ್ದರು. ಇದೀಗ ಕೆಂಪುಕೋಟೆಯಲ್ಲಿ ಸತತ 12ನೇ ಧ್ವಜಾರೋಹಣ ಭಾಷಣ ಮಾಡಿ ಇಂದಿರಾಗಾಂಧಿ ಅವರ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ: ಕುಮಾರಸ್ವಾಮಿ ಗುಣಗಾನ
ಅತಿ ಚಿಕ್ಕ ಭಾಷಣ ಮಾಡಿದ್ದ ನೆಹರೂ, ಇಂದಿರಾ
ಮಾಜಿ ಪ್ರಧಾನಿಗಳಾದ ನೆಹರು 1954ರಲ್ಲಿ ಮತ್ತು ಇಂದಿರಾ ಗಾಂಧಿ ಅವರು 1966 ರಲ್ಲಿ 14 ನಿಮಿಷಗಳಷ್ಟು ಕಡಿಮೆ ಭಾಷಣ ಮಾಡಿದ್ದರು. ಇದು ಅತೀ ಕಡಿಮೆ ಧ್ವಜಾರೋಹಣ ಭಾಷಣ ಎಂದು ದಾಖಲೆಯಾಗಿದೆ. 2012 ಮತ್ತು 2013ರಲ್ಲಿ ಮನಮೋಹನ್ ಸಿಂಗ್ ಅವರು ಕ್ರಮವಾಗಿ 32 ಮತ್ತು 35 ನಿಮಿಷಗಳಷ್ಟು ಭಾಷಣ ಮಾಡಿದ್ದರು. 2002 ಹಾಗೂ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾಷಣಗಳು ಕ್ರಮವಾಗಿ 25 ಮತ್ತು 30 ನಿಮಿಷಗಳಷ್ಟು ಮಾತ್ರವೇ ಇದ್ದವು. ಇದನ್ನೂ ಓದಿ: ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್ ಗಿಫ್ಟ್ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್ ಯೋಜನೆ