– ಮೆಡಿಕಲ್ ಕಂಡಿಷನ್ ಬೇಲ್ ಪಡೆದು ಸರ್ಜರಿಯನ್ನೇ ಮಾಡಿಸಲಿಲ್ಲ
– ಜಾಮೀನಿನ ಸ್ವಾತಂತ್ರ್ಯ ದುರುಪಯೋಗ; ಕೋರ್ಟ್ ತೀವ್ರ ಆಕ್ಷೇಪ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ-2 ದರ್ಶನ್, ಎ-1 ಪವಿತ್ರಾಗೌಡ (Darshan And Pavithra Gowda) ಸೇರಿದಂತೆ, 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಎಲ್ಲಾ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಅಂತ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳಿಗೆ ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ (Medical test) ನಡೆಸಿದರು. ಈ ವೇಳೆ, ಬೆನ್ನು ನೋವಿದೆ ಅಂತ ದರ್ಶನ್ ಹೇಳಿದ್ರು, ಒತ್ತಡದಿಂದ ಬಿಪಿ ಹೆಚ್ಚಾಗಿದೆ ಅಂತ ಡಾಕ್ಟರ್ ಹೇಳಿದರು ಅಂತ ತಿಳಿದುಬಂದಿದೆ. ವೈದ್ಯಕೀಯ ತಪಾಸಣೆ ಬಳಿಕ ಡಿಗ್ಯಾಂಗ್‌ನ ಐವರು ಆರೋಪಿಗಳನ್ನು ಕೋರಮಂಗಲದಲ್ಲಿರುವ ಜಡ್ಜ್ ನಿವಾಸದ ಎದುರು ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.
ಇನ್ನೂ ಮುಖ್ಯವಾಗಿ ನೋಡೊದಾದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆಯೂ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಕೊಲೆ ಕೇಸಲ್ಲಿ ದರ್ಶನ್ ಪಾತ್ರವೇನು? ಅಂತ ವಿವರವಾಗಿ ಹೇಳಿದೆ. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್ ಅರೆಸ್ಟ್
ದರ್ಶನ್ ಪಾತ್ರದ ಬಗ್ಗೆ ಕೋರ್ಟ್ ಹೇಳಿದ್ದೇನು?
ಈ ಕೊಲೆ ಹಠಾತ್ ಪ್ರಚೋದನೆ ಅಥವಾ ಭಾವನೆಗಳು ಸ್ಫೋಟಗೊಂಡು ಮಾಡಿರುವ ಪ್ರಕರಣ ಅಲ್ಲ. ಪುರಾವೆಗಳನ್ನ ನೋಡಿದಾಗ ಇದು, ಪೂರ್ವಯೋಜಿತ, ಸಂಘಟಿತ ಅಪರಾಧವನ್ನ ಸೂಚಿಸುತ್ತೆ. ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟಿವಿ ದೃಶ್ಯ ನಾಶವಾಗಿದೆ. ಅಲ್ಲದೇ ಇನ್ನಿತರ ಆರೋಪಿಗಳನ್ನ ಶರಣಾಗಲು ಹೇಳಿ ತನಿಖಾ ಹಾದಿ ತಪ್ಪಿಸಲು ಪ್ರಭಾವ ಬಳಸಿದ್ದಾರೆ.
ಇದಕ್ಕೆ ದರ್ಶನ್ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಅಂದಿದ್ದಾರೆ ಹೇಳಿದ್ದಕ್ಕೆ ಗರಂ ಆದ ನ್ಯಾಯಪೀಠ, ದರ್ಶನ್ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ ಎ10 – ಎ14ಗೆ ಶರಣಾಗುವಂತೆ ಹೇಳಿದ್ದಾರೆ. ಇದಕ್ಕಾಗಿ ದರ್ಶನ್ ಹಣ ಪಾವತಿ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಸಾಕ್ಷಿಧಾರರ ಜೊತೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ, ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಕೋರ್ಟ್ ದರ್ಶನ್ ಪಾತ್ರದ ಬಗ್ಗ ಹೇಳಿದೆ. ಇದನ್ನೂ ಓದಿ: 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್
ಅಲ್ಲದೇ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸಿರೋ ಸುಪ್ರೀಂ ಕೋರ್ಟ್ 4 ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಿದೆ. ವೈದ್ಯಕೀಯ ಆಧಾರದಡಿ ಕೊಟ್ಟಿರೋ ಜಾಮೀನಿಗೂ ಆಕ್ಷೇಪ ಎತ್ತಿದೆ. ಸುಪ್ರೀಂ ಕೋರ್ಟ್ ಯಾವ್ಯಾವ ಅಂಶಗಳನ್ನ ಪ್ರಮುಖವಾಗಿ ಪರಿಗಣಿಸಿದೆ. ಅವುಗಳನ್ನ ನೋಡೊದಾದ್ರೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ
ಯಾವ್ಯಾವ ಆಯಾಮದಲ್ಲಿ ಸುಪ್ರೀಂ ಆದೇಶ?
1. ಪ್ರಕರಣದ ಸ್ವರೂಪ ಮತ್ತು ತೀವ್ರತೆ
2. ಸಾಕ್ಷ್ಯನಾಶ & ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ
3. ಸುಳ್ಳು ವೈದ್ಯಕೀಯ ಕಾರಣಗಳನ್ನ ನೀಡಿ ಪಡೆದ ಜಾಮೀನು
4. ವಸ್ತುನಿಷ್ಠ ವಿಚಾರಗಳನ್ನ ಪರಿಗಣಿಸದೇ ಹೈಕೋರ್ಟ್ ನೀಡಿದ ಜಾಮೀನು ಆದೇಶ
ವೈದ್ಯಕೀಯ ಕಾರಣದಡಿ ಕೊಟ್ಟ ಜಾಮೀನಿಗೆ ಆಕ್ಷೇಪ ಏನು..?
* ಡಿ.13ಕ್ಕೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಮೆಡಿಕಲ್ ಕಂಡಿಷನ್ ಎಂದು ಹೇಳಿತ್ತು.
* ಜಾಮೀನು ಪಡೆದ ನಂತರದ ದರ್ಶನ್ ನಡವಳಿಕೆ ದಾರಿತಪ್ಪಿಸುವ, ಉತ್ರ್ಪೇಕ್ಷಿತ ರೀತಿಯಲ್ಲಿತ್ತು.
* ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ ಡಯಾಬಿಟಿಸ್, ಬಿಪಿ, ಹೃದ್ರೋಗ ಸಮಸ್ಯೆ & ಭವಿಷ್ಯದಲ್ಲಿ ಸರ್ಜರಿ ಬೇಕಾಗಬಹುದು ಎಂದಿತ್ತು.
* ಆದರೆ, ಇದರಲ್ಲಿ ಎಲ್ಲೂ ಸರ್ಜರಿ ತಕ್ಷಣ ಅಗತ್ಯವಿದೆ, ಜೀವಕ್ಕೆ ಕುತ್ತಾಗಲಿದೆ ಎಂದು ಹೇಳಿರಲಿಲ್ಲ
* ಹೀಗಾಗಿ, ಮೆಡಿಕಲ್ ಗ್ರೌಂಡಲ್ಲಿ ಜಾಮೀನು ಅಗತ್ಯವಿರಲಿಲ್ಲ.
* ಹೈಕೋರ್ಟ್‌ನಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿ ದರ್ಶನ್ ಹಲವು ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡರು.
* ಹೈಪ್ರೊಫೈಲ್ ಸೋಷಿಯಲ್ ಇವೆಂಟ್‌ಗಳಲ್ಲಿ ಪೂರ್ಣ ಆರೋಗ್ಯಯುತರಾಗಿರುವಂತೆ ಭಾಗಿಯಾದ್ರು.
* ಜೈಲ್‌ನಿಂದ ಬಿಡುಗಡೆ ಬಳಿಕ ಸರ್ಜರಿಯೂ ಮಾಡಿಸಲಿಲ್ಲ.
* ಸುಳ್ಳು ಮೆಡಿಕಲ್ ಕಾರಣಗಳನ್ನ ನೀಡಿ ದರ್ಶನ್ ಜಾಮೀನಿನ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡರು ಎಂದು ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.