ಗದಗ: ಬಿರಿಯಾನಿ ತಿನ್ನಲು ಹೋಟೆಲ್‌ಗೆ ಬಂದಾತನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಗದಗ (Gadag) ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಬಸವರಾಜ್ ಮಮ್ಮಟಗೇರಿ (22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನರಗುಂದ (Naragund) ಪಟ್ಟಣದಲ್ಲಿದ್ದ ತಾಜ್ ಹೋಟೆಲ್‌ಗೆ ಬಸವರಾಜ್ ಬಿರಿಯಾನಿ (Biriyani) ತಿನ್ನಲು ಬಂದಿದ್ದ. ಇದನ್ನೂ ಓದಿ: ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶಕ್ಕೆ ನಿರ್ಬಂಧ
ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದಪುಡಿ ಮನಸೋ ಇಚ್ಛೆ ಹಲ್ಲೆ ಮಾಡಿ, ಹತ್ಯೆಗೈದು ಪರಾರಿಯಾಗಿದ್ದರು.
ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ನರಗುಂದ ಡಿವೈಎಸ್ಪಿ ಪ್ರಭು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.