ಬೆಂಗಳೂರು: ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash) ಹತ್ಯೆ ಕೇಸ್ ತನಿಖೆ ಮಾಡಿ ಸಿಸಿಬಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಕೊಲೆಯಾದ ಓಂಪ್ರಕಾಶ್ ಮಗಳ ಹೆಸರನ್ನ ಕೈಬಿಟ್ಟು ಚಾರ್ಜ್‌ಶೀಟ್ ಮಾಡಲಾಗಿದೆ. ಓಂಪ್ರಕಾಶ್ ಕೊಲೆಯಾದ ಬಳಿಕ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳ ವಿರುದ್ಧ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆಗೆ 1 ವಾರದಿಂದ ಸ್ಕೆಚ್ ಹಾಕಿದ್ದ ಪತ್ನಿ, ಪುತ್ರಿ!
ಎಫ್‌ಐಆರ್‌ನಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿಯನ್ನ ಎ1 ಆರೋಪಿ, ಮಗಳನ್ನ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ತನಿಖೆಯ ವೇಳೆ ಓಂಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರ ಇಲ್ಲ ಅನ್ನೋದು ಕಂಡು ಬಂದಿದೆ. ಹೀಗಾಗಿ, ತಂದೆಯ ಮರ್ಡರ್ ಕೇಸ್‌ನಲ್ಲಿ ಎ2 ಆರೋಪಿಯಾಗಿದ್ದ ಮಗಳನ್ನ ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿದೆ.
ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಿಸಿಬಿ ಸಲ್ಲಿಕೆ ಮಾಡಿದ್ದು, ಕೊಲೆಗೆ ಪ್ರಮುಖವಾದ ಕಾರಣ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯ ವಿಚಾರ ಎಂದು ಉಲ್ಲೇಖ ಮಾಡಿದೆ. ಪ್ರಕರಣದ ತನಿಖೆ ಮುಂದುವರೆಸಲು ಕೊಲೆಯಾದ ಡಿಜಿ-ಐಜಿಪಿ ಮಗ ಕಾರ್ತಿಕೇಶ್, ಪ್ರಕರಣದ ತನಿಖೆ ಮುಂದುವರೆಸಲು ಸರ್ಕಾರದಿಂದ ಅನುಮತಿ ಪಡೆದು ಸ್ವಂತ ಖರ್ಚಿನಲ್ಲಿ ಎಸ್‌ಪಿಪಿಯನ್ನ ನೇಮಕ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್ ಪತ್ನಿ ಅರೆಸ್ಟ್