– ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಸಂಸತ್ತಿನ ಮಕರದ್ವಾರದಲ್ಲಿ ಟಿ-ಶರ್ಟ್ ಪ್ರತಿಭಟನೆ
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR – ಸರ್) ವಿಚಾರವಾಗಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಇಂದು ಸಹ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯ (Rajya Sabha) ಕಲಾಪವನ್ನ ಮುಂದೂಡಲಾಯಿತು.
बिहार से SIR की शुरुआत की गई है, जो अब पूरे देश में करने जा रहे हैं।
हमारी मांग है कि SIR पर चर्चा हो, लेकिन BJP सरकार चर्चा से भाग रही है। विपक्ष चाहता है कि सदन चले, लेकिन BJP सरकार सदन नहीं चलने दे रही है।
ये वोट चोरी की सरकार है। pic.twitter.com/1U9AteXa8V
— Mallikarjun Kharge (@kharge) August 12, 2025
ಮತಗಳವು, ಬಿಹಾರದ ಎಸ್‌ಐಆರ್ ವಿರೋಧಿಸಿ ಸಂಸತ್ ಭವನದ ಸಂಕೀರ್ಣದಲ್ಲಿ INDIA ಒಕ್ಕೂಟದ ಪಕ್ಷಗಳ ಸಂಸದರು ‘ಟಿ-ಶರ್ಟ್ ಪ್ರತಿಭಟನೆ’ ನಡೆಸಿದರು. ಬಿಹಾರ ಮತದಾರರ ಪಟ್ಟಿಯಲ್ಲಿದ್ದಾರೆ ಎನ್ನಲಾದ 124 ವರ್ಷ ವಯಸ್ಸಿನ ಮತದಾರ ಮಹಿಳೆಯ ಹೆಸರು ಹೊಂದಿರುವ ಬಿಳಿ ಟಿ-ಶರ್ಟ್‌ಗನ್ನು (T Shirt) ಧರಿಸಿ ಪ್ರತಿಪಕ್ಷಗಳು ಸಂಸದರು, ಪ್ರತಿಭಟನೆ (Protest) ನಡೆಸಿದರು. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ
वोट चोर – गद्दी छोड़ !!
INDIA गठबंधन का आज संसद में एक बार फिर प्रदर्शन। pic.twitter.com/wxcIuZ8Rsz
— Mallikarjun Kharge (@kharge) August 12, 2025
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಟಿಎಂಸಿಯ ಒಬ್ರೇನ್, ಡಿಎಂಕೆಯ ಟಾರ್ ಬಾಲು, ಎಡ ಪಕ್ಷಗಳ ಇತರ ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಜಮಾಯಿಸಿ ಪ್ರತಿಭಟನೆಮಾಡಿದರು. ರಾಜೀವ್ ಕುಮಾರ್ ಮತ್ತು ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಬಿಜೆಪಿಯ ಇಲಾಖೆಯಾಗಿದೆ ಎಂದು ಕಾಂಗ್ರೆಸ್‌ನ ಮಾಣಿಕಮ್ ಟ್ಯಾಗೋರ್ ಆರೋಪಿಸಿದರು. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗಾಗಿ 3 ಸಾವಿರ ಮತ ಖರೀದಿಸಲಾಗಿತ್ತು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ಆಧರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯಸಭಾ ಬಿಜೆಪಿ ಸಂಸದ ಲೇಹರ್ ಸಿಂಗ್ ದೂರು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತ, ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಪ್ರಸನ್ನಾ ಎಂಬ ಮಹಿಳೆಯೊಬ್ಬರು ತಮ್ಮ ವಿಳಾಸ ಬಳಸಿಕೊಂಡು ತಮಗೆ ತಿಳಿಯದೇ 9 ನಕಲಿ ಮತಗಳನ್ನು ನೋಂದಾಯಿಸಲಾಗಿದೆ ಎಂದು ಆರೋಪಿಸಿ ಡಿಸಿಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಏನ್ ಮಾಡ್ತಿದ್ದೀರಿ… ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿಯನ್ನ ಗದರಿಸಿ ದೂರ ತಳ್ಳಿದ ಜಯಾ ಬಚ್ಚನ್