ಚಾಮರಾಜನಗರ: ವನ್ಯ ಪ್ರಾಣಿಗಳ ತಾಣ ಅಂದ್ರೆ ಅದು ಚಾಮರಾಜನಗರ. ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತ ಅರಣ್ಯ ಹಾಗೂ ಎರಡು ವನ್ಯಧಾಮ ಹೊಂದಿರುವ ಏಕೈಕ ಜಿಲ್ಲೆ. ಚಾಮರಾಜನಗರ ಹುಲಿಗಳಲ್ಲಿ ಅಷ್ಟೇ ಅಲ್ಲ, ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್ 1 ಆಗಿದೆ.
ಹೌದು, ಆ.12ರಂದು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ. ಇದೊಂದು ವನ್ಯಜೀವಿಗಳ ವಾಸಸ್ಥಾನವೆಂದರೆ ತಪ್ಪಲ್ಲ. 2023ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದವು. ಈ ಪೈಕಿ ಚಾಮರಾಜನಗರ ಜಿಲ್ಲೆಯಲ್ಲೇ 2,500ಕ್ಕೂ ಹೆಚ್ಚು ಆನೆಗಳಿದ್ದವು. ಬಂಡೀಪುರದಲ್ಲಿ 1,116, ಬಿಆರ್‌ಟಿ 619, ಮಹದೇಶ್ವರ ವನ್ಯಧಾಮ 706, ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿದ್ದವು. ಇದೀಗ ಆನೆಗಳ ಸಂಖ್ಯೆಯಲ್ಲಿ ಏರಿಯಾಗಿದೆ.ಇದನ್ನೂ ಓದಿ: ಆಟವಾಡುತ್ತಾ ಬಾವಿಗೆ ಬಿದ್ದ 8ರ ಬಾಲಕಿ ಸಾವು
ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಬಂಡೀಪುರದಲ್ಲಿ 1,500ಕ್ಕೂ ಹೆಚ್ಚು, ಮಹದೇಶ್ವರ, ಕಾವೇರಿ, ಬಿಆರ್‌ಟಿ ಮೂರು ಸೇರಿ ಅಂದಾಜು 1,800ಕ್ಕೂ ಹೆಚ್ಚು ಆನೆಗಳಿವೆ ಎಂದು ತಿಳಿಸಿದ್ದಾರೆ. ಅದಲ್ಲದೇ ರಾಜ್ಯದಲ್ಲಿ ಕೂಡ ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2025ರ ವರದಿ ಇನ್ನೂ ಅಧಿಕಾರಿಗಳ ಕೈಸೇರಬೇಕಿದೆ.
ಇನ್ನೂ ಚಾಮರಾಜನಗರ ಜಿಲ್ಲೆಯ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವು ಕಾರಣವಾಗಿದೆ. ಅಲ್ಲದೇ ಕಾಡಂಚಿನ ಜನರು ಅರಣ್ಯ ಇಲಾಖೆಗೆ ಸಾಕಷ್ಟು ಸಹಕಾರ ಕೊಡ್ತಿದ್ದಾರೆ. ಕಾಡಾನೆ-ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಕಾರ್ಯಗಳ ಪರಿಣಾಮ ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಕೆ, ಆನೆ ಕಂದಕ ಸೇರಿ ಹಲವು ಯೋಜನೆಗಳ ಪರಿಣಾಮ ಕಾಡಾನೆ ಸಂಖ್ಯೆ ಹೆಚ್ಚಳಕ್ಕೆ ನೆರವಾಗಿದೆ.ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ