ಬೆಂಗಳೂರು: ಕೆಎನ್ ರಾಜಣ್ಣ (KN Rajanna) ಏನು ತಪ್ಪು ಹೇಳಿದ್ದಾರೆ ಎಂದು ಪುತ್ರ, ಪರಿಷತ್ ಸದಸ್ಯ ರಾಜೇಂದ್ರ (Rajendra) ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ವೇಳೆ ನಮ್ಮದೇ ಸರ್ಕಾರ ಇತ್ತು, ಲೋಪ ಸರಿಪಡಿಸಿಕೊಳ್ಳಬಹುದಿತ್ತು ಅಂದಿದ್ದಾರೆ. ಅದರಲ್ಲಿ ಏನು ತಪ್ಪಿದೆ ಎಂದು ಕೇಳಿದ್ದಾರೆ.
ಪಕ್ಷ ರಾಜೀನಾಮೆ ಕೊಡು ಎಂದರೆ ರಾಜಣ್ಣ ರಾಜೀನಾಮೆ ಕೊಡುತ್ತಾರೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ರಾಜಣ್ಣ ಎನ್ ಚಿಕ್ಕವರಲ್ಲ. ಯಾರೋ ಪತ್ರ ಬರೆದಿದ್ದಕ್ಕೆ ಅವರು ರಾಜೀನಾಮೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ನಮಗೂ ಹೆಚ್ಚಿನ ಮಾಹಿತಿ ಇಲ್ಲ. ರಾಜೀನಾಮೆ ವಿಚಾರ ಮಾಧ್ಯಮದ ಮೂಲಕವೇ ತಿಳಿದಿದೆ. ತಂದೆ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.