ಬೆಂಗಳೂರು: ಸಮಾಜದ ಸಬಲೀಕರಣಕ್ಕೆ ಉತ್ತಮ ಶಿಕ್ಷಣ ಸಿಗ್ಬೇಕು ಎಂದು ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್ (Dr C N Ashwath Narayan) ಹೇಳಿದರು.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ‘ಪಬ್ಲಿಕ್ ಟಿವಿ’ ಪ್ರಸ್ತುತಪಡಿಸುವ 4ನೇ ಆವೃತ್ತಿಯ ವಿದ್ಯಾಮಂದಿರ (Vidhya Mandira) ಸ್ನಾತ್ತಕೋತ್ತರ ಶೈಕ್ಷಣಿಕ ಮೇಳದಲ್ಲಿ ((PG Education Expo) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ನಮ್ಮ ಪಬ್ಲಿಕ್ ಟಿವಿ ವಿದ್ಯಾರ್ಥಿಗಳಿಗಾಗಿ ವಿದ್ಯಾಮಂದಿರ ಶೈಕ್ಷಣಿಕ ಮೇಳವನ್ನು ಮಾಡ್ತಿದೆ. ಶಿಕ್ಷಣ ತುಂಬಾ ಮುಖ್ಯವಾದ ವಿಷಯ. ದೇಶವನ್ನ ಮುನ್ನಡಿಸಬೇಕು ಅಂದರೆ ಅದಕ್ಕೆ ಶಿಕ್ಷಣ ಮುಖ್ಯ ಎಂದರು. ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದ್ರೆ ಉನ್ನತ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗ್ಬೇಕು: ಹೆಚ್‌ಆರ್ ರಂಗನಾಥ್
ಶಿಕ್ಷಣ ಕ್ಷೇತ್ರದಲ್ಲಿ ಈಗ ಭಾರಿ ಪೈಪೋಟಿಯಿದೆ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಯೂಟರ್ನ್ ಮಾಡ್ತಾರೆ. ಡಿಗ್ರಿಗೆ ಶಿಕ್ಷಣ ಮುಗಿಸ್ತಾರೆ. ಉನ್ನತ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಕೊರತೆಯಿದೆ. ಪಾಲಿಸಿ ಇಲ್ಲ ಅಂದ್ರೆ ಯಾವ ಸಿಸ್ಟಮ್ ಸಹ ನಡೆಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ
ಜನರಿಗೆ ಭಾವನಾತ್ಮಕವಾಗಿ ದಾರಿ ತಪ್ಪಿಸುವ ಕೆಲಸ ಆಗ್ತಿದೆ. ಸಮಾಜದ ಸಬಲೀಕರಣಕ್ಕೆ ಉತ್ತಮ ಶಿಕ್ಷಣ ಸಿಗ್ಬೇಕು. ಶಿಕ್ಷಣ ಶಕ್ತಿ ಏನು ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.