ನಟ ದರ್ಶನ್ (Darshan) ಬುಧವಾರ ಸಂಜೆ ದಿಢೀರ್ ಮೈಸೂರಿಗೆ (Mysuru) ಆಗಮಿಸಿ ಚಾಮುಂಡಿ ದೇವಿ (Chamundi Hills) ದರ್ಶನ ಪಡೆದಿದ್ದಾರೆ. ಈ ಹಿಂದೆ ಆಷಾಢ ಶುಕ್ರವಾರಕ್ಕೆ ಕುಟುಂಬದ ಜೊತೆ ಆಗಮಿಸಿದ್ದ ದರ್ಶನ್ ಇದೀಗ ಏಕಾಂಗಿಯಾಗಿ ಆಗಮಿಸಿ ತಾಯಿ ಚಾಮುಂಡಿ ಪಾದಕ್ಕೆರಗಿದ್ದಾರೆ.
ದರ್ಶನ್ ಈ ಭೇಟಿ ಹಲವು ಕಥೆಗಳನ್ನ ಹುಟ್ಟುಹಾಕಿದೆ. ವಾರದ ಹಿಂದೆ ದರ್ಶನ್ ಅಸ್ಸಾಂನ ಗುವಾಹಟಿಯ ಕಾಮಾಕ್ಯದೇವಿ ದರ್ಶನ ಮಾಡಿ ಬಂದಿದ್ದರು. ಇದೀಗ ಮತ್ತೋರ್ವ ಶಕ್ತಿ ಸ್ವರೂಪಿಣಿಯ ಸ್ಮರಣೆ ಮಾಡಿದ್ದಾರೆ. ಇದನ್ನೂ ಓದಿ: ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ
View this post on Instagram
ಸಾಮಾನ್ಯವಾಗಿ ದರ್ಶನ್ ಆಷಾಢ ಮಾಸದ ಶುಕ್ರವಾರ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಹೊರತಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಡೋದಿಲ್ಲ. ಆದರೀಗ ಶ್ರಾವಣ ಮಾಸದ ಬುಧವಾರ ದಿಢೀರ್ ಚಾಮುಂಡಮ್ಮನ ಆಶೀರ್ವಾದ ಬೇಡಿರುವುದು ವಿಶೇಷ. ಸದ್ಯದಲ್ಲೇ ದರ್ಶನ್‌ಗೆ ನೀಡಿರುವ ಜಾಮೀನಿನ ರದ್ದು ಕೋರಿ ಸಲ್ಲಿಸಲಾದ ಅರ್ಜಿಯ ಆದೇಶ ಹೊರಬೀಳುತ್ತೆ. ಇದೇ ಆತಂಕದಲ್ಲೇ ಇರುವ ದರ್ಶನ್ ನೆಮ್ಮದಿಗಾಗಿ ದೇವಾನ್ ದೇವತೆಗಳ ಮೊರೆ ಹೋಗುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಇಷ್ಟಲ್ಲದೇ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಗಳ ಬಂಧನವಾಗಿದ್ದು, ಅವರು ದರ್ಶನ್ ಅಭಿಮಾನಿಗಳು ಎಂದು ತನಿಖೆಯಲ್ಲಿ ಬಯಲಾಗುತ್ತಿದೆ. ಇದು ದರ್ಶನ್ ಹೆಸರಿಗೆ ಮತ್ತೆ ಕಳಂಕ ತಂದಿಟ್ಟಿದೆ. ಇದೆಲ್ಲದರ ಚಿಂತೆಯಲ್ಲಿರುವ ದರ್ಶನ್, ದಿಢೀರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ ಅನ್ನೋದು ಚರ್ಚೆ. ಇದನ್ನೂ ಓದಿ: ಮನೆಯ ಟೆರೆಸ್ ಪೂರ್ತಿ ಸಮಂತಾ ಚಿತ್ರ ಬಿಡಿಸಿದ ಅಭಿಮಾನಿ!