– ಹೆಂಡತಿ ಮಡಿಲಲ್ಲೇ ಪ್ರಾಣ ಬಿಟ್ಟ ಗಂಡ
ಪಾಟ್ನಾ: ಅಂತರ್ಜಾತಿ ವಿವಾಹ (Intercaste Marriage) ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿರುವ (Darbhanga) ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ರಾಹುಲ್ ಕುಮಾರ್ (25) ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (Medical College Hospital) 2ನೇ ವರ್ಷದ ಬಿಎಸ್ಸಿ ನರ್ಗಿಂಗ್ ವ್ಯಾಸಂಗ ಮಾಡುತ್ತಿದ್ದ. 4 ತಿಂಗಳ ಹಿಂದಷ್ಟೇ ಅದೇ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತನ್ನು ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ರಾಹುಲ್ ಅಂತರ್ಜಾತಿ ಅನ್ನೋ ಕಾರಣಕ್ಕೆ ಕುಟುಂಬದವರಿಂದ ಭಾರೀ ವಿರೋಧ ಇತ್ತು ಅಂತ ತಿಳಿದುಬಂದಿದೆ.
ಇನ್ನೂ ಗುಂಡಿಕ್ಕಿ ಹತ್ಯೆಗೈದ ಬೆನ್ನಲ್ಲೇ ರಾಹುಲ್‌ನ ಸ್ನೇಹಿತರು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ
ಹೆಂಡತಿ ಮಡಿಲಲ್ಲೇ ಪ್ರಾಣಬಿಟ್ಟ ಗಂಡ
ಮಂಗಳವಾರ (ಆ.5) ಸಂಜೆ ಹೂಡಿ (ಪುಲೋವರ್ ಮಾದರಿಯ ಜೆರ್ಸಿ) ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ನ ಬಳಿಗೆ ಬಂದಿದ್ದ. ಹತ್ತಿರ ಬಂದಾಗ ಅದು ನನ್ನ ತಂದೆ ಅನ್ನೋದು ಗೊತ್ತಾಯ್ತ. ಅವರ ಕೈಯಲ್ಲಿ ಬಂದೂಕು ಇತ್ತು. ನನ್ನ ಕಣ್ಮುಂದೆಯೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದ್ರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು ಅಂತ ತನ್ನು ಕಣ್ಣೀರಿಟ್ಟಿದ್ದಾಳೆ. ಇದನ್ನೂ ಓದಿ: ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ
ನನ್ನ ಇಡೀ ಕುಟುಂಬ ಈ ಸಂಚಿನಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ ಎಂದು ವದರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್ ಮತ್ತೆ ಬೆದರಿಕೆ