ಕಾಟೇರ (Kaatera) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಮಾಲಾಶ್ರೀ (Malashree) ಪುತ್ರಿ ಆರಾಧನಾ (Aradhana) ಇದೀಗ ಬಹಳ ಗ್ಯಾಪ್ ಬಳಿಕ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರ ಅಭಿನಯದ ನೆಕ್ಸ್ಟ್ ಲೆವೆಲ್ (Next Level) ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ
ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದು ಶೀರ್ಷಿಕೆ, ಕಾಂಬಿನೇಷನ್ ಎಲ್ಲವೂ ಘೋಷಣೆಯಾದಾಗಲೇ ಹೊಸ ವೈಬ್ ಸೃಷ್ಟಿಸಿತ್ತು. ಇದೀಗ ನಾಯಕಿ ಆಯ್ಕೆಯಲ್ಲೂ ಆರಂಭದಲ್ಲೇ ಸಿನಿಮಾ ಟೀಮ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?
ಉಪೇಂದ್ರಾಗೂ (Upendra) ಆರಾಧನಾಗೂ ವಯಸ್ಸಿನ ಭಾರೀ ಅಂತರವಿದ್ದು ಈ ಜೋಡಿ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಕುತೂಹಲ. ಈ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡ, ಸಿನಿಮಾ ಕಥೆಯಲ್ಲಿ ಇಬ್ಬರ ವಯಸ್ಸಿಗೂ ನ್ಯಾಯ ಕೊಡುವ ಪಾತ್ರ ಹೆಣೆಯಲಾಗಿದ್ದು ಸಿನಿಮಾ ನೋಡಿದ ಬಳಿಕ ಅದರ ರಹಸ್ಯ ತಿಳಿಯಲಿದೆ ಎಂದಿದೆ.
ನೆಕ್ಸ್ಟ್ ಲೆವೆಲ್ ಈ ಚಿತ್ರದ ಶೂಟಿಂಗ್ ಇದೇ ಬರುವ ನವೆಂಬರ್‌ನಿಂದ ಪ್ರಾರಂಭವಾಗಲಿದ್ದು ಸದ್ಯಕ್ಕೆ ಪ್ರೀಪ್ರೊಡಕ್ಷನ್ ತಯಾರಿ ನಡೆಯುತ್ತಿದೆ. ಕಾಟೇರ ಚಿತ್ರದ ಬಳಿಕ ಆ ಪಾತ್ರಕ್ಕಿಂತ ಭಿನ್ನ ಕ್ಯಾರೆಕ್ಟರ್ ಹುಡುಕುತ್ತಿದ್ದ ನಟಿ ಆರಾಧನಾ ಅಪ್ರೋಚ್ ಆಗಿದ್ದ ಬೇರೆಲ್ಲಾ ಆಫರ್‌ಗಳನ್ನ ಫಿಲ್ಟರ್ ಮಾಡಿ ನೆಕ್ಸ್ಟ್ ಲೆವೆಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಇಲ್ಲಿ ಆರಾಧನಾ ಕಾಟೇರದ ನಾಯಕಿ ಪ್ರಭಾ ಪಾತ್ರದ ವಿರುದ್ಧ ಪಾತ್ರದಲ್ಲಿ ನಟಿಸುತ್ತಿದ್ದು ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಲುಕ್‌ಟೆಸ್ಟ್ ಫೋಟೋಶೂಟ್ ಕೂಡ ಮಾಡಿಸಲಾಗಿದ್ದು ಆರಾಧನಾ ಸಖತ್ ಆಗಿ ಮಿಂಚಿದ್ದಾರೆ.