ಮಂಡ್ಯ: ಕನ್ನಂಬಾಡಿ ಕಟ್ಟೆಗೆ (Kannambadi Katte) ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂಬ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಒಂದು ಕಡೆ ಇತಿಹಾಸ ತಜ್ಞರು, ಟಿಪ್ಪು ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿಲ್ಲ. ಆತ ಬೇರೆ ಕಡೆ ಅಣೆಕಟ್ಟನ್ನು ಕಟ್ಟಬೇಕೆಂದು ಚಿಂತನೆ ಮಾಡಿ ಅಡಿಗಲ್ಲು ಹಾಕಿರೋದು ಎಂದು ಹೇಳುತ್ತಿದ್ದಾರೆ.
ಇನ್ನೊಂದು ಕಡೆ ಸಚಿವ ಮಹದೇವಪ್ಪ (H C Mahadevappa) ಕೆಆರ್‌ಎಸ್ ಮುಖ್ಯ ದ್ವಾರದಲ್ಲಿ ಇರುವ ನಾಮಫಲಕವನ್ನು ಹಾಕಿ ಎಂದು ನಾನು ಹೇಳಿದ್ದಕ್ಕೆ ಸಾಕ್ಷಿ ಎಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯಿಂದ ರಸ್ತೆಗಿಳಿಯಲ್ಲ ಬಸ್? – ಇಂದು ಸಿಎಂ ಸಭೆ, ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಜಿಲ್ಲಾಡಳಿತ ಕ್ರಮ
ಕೆಆರ್‌ಎಸ್ ಡ್ಯಾಂನ (KRS Dam) ಸೌತ್ ಗೇಟ್‌ನಲ್ಲಿ ನಾಮಫಲಕಗಳು ಇವೆ. ಇದರಲ್ಲಿ ಡ್ಯಾಂ ನಿರ್ಮಾಣದ ಪ್ರಾರಂಭ, ಕಾಮಗಾರಿ ಮುಕ್ತಾಯವಾಗಿದ್ದು, ಆ ಸಂದರ್ಭದಲ್ಲಿ ಯಾವ ರಾಜರಿದ್ದರು? ದಿವಾನರು, ಎಂಜಿನಿಯರ್‌ಗಳು ಯಾರು? ಹಾಗೂ ಡ್ಯಾಂನ ನೀಲಿ ನಕ್ಷೆಯ ಮಾಹಿತಿಗಳನ್ನು ಒಳಗೊಂಡಿವೆ. ಇದಲ್ಲದೇ ಕನ್ನಡ, ಪರ್ಷಿಯನ್, ಇಂಗ್ಲಿಷ್ ಭಾಷೆಯಲ್ಲಿ ಈ ನಾಮಫಲಕಗಳಿವೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?
ಇದರಲ್ಲಿ 1794ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಕಾವೇರಿ ನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿರುವುದಾಗಿ ಉಲ್ಲೇಖವಾಗಿದೆ. ಆದರೆ ಈ ಬರಹಗಳಲ್ಲಿ ಎಲ್ಲೂ ಸಹ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವೆ ಎಂದು ಉಲ್ಲೇಖವಾಗಿಲ್ಲ. ಕನ್ನಂಬಾಡಿ ಕಟ್ಟೆಯ ಕಾರ್ಯ ಆರಂಭವಾಗಿದ್ದು 1911ರಲ್ಲಿ, ಅಲ್ಲಿಗೆ ಟಿಪ್ಪು ಅಂದುಕೊಂಡಿದ್ದಕ್ಕೂ ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿದ್ದಕ್ಕೂ 119 ವರ್ಷಗಳ ಅಂತರವಿದೆ. ಇದನ್ನೂ ಓದಿ: ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್
ಹೀಗಾಗಿ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಟಿಪ್ಪು ಅಡಿಗಲ್ಲು ಹಾಕಿಲ್ಲ. ಟಿಪ್ಪು ಈ ಭಾಗದಲ್ಲಿ ಒಂದು ಅಣೆಕಟ್ಟನ್ನು ಕಟ್ಟಬೇಕೆಂದು ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ ಈ ಜಾಗದಲ್ಲಿ ಕನ್ನಂಬಾಡಿ ಕಟ್ಟೆಗೆ ಶಂಕುಸ್ಥಾಪನೆ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್. ಟಿಪ್ಪು ಸಹ ಈ ಭಾಗದಲ್ಲಿ ಅಣೆಕಟ್ಟನ್ನು ನಿರ್ಮಾಣ ಮಾಡುಲು ಮುಂದಾಗಿದ್ದರು ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ್ ಕುರಿತ ಶಿಲಾನ್ಯಾಸವನ್ನು ಇಲ್ಲಿ ಹಾಕಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ.