ಬೆಂಗಳೂರು: ಧರ್ಮಸ್ಥಳದ (Dharmasthala) ನೇತ್ರಾವತಿ ದಂಡೆಯ ಪಾಯಿಂಟ್ 6 ರಲ್ಲಿ ಸಿಕ್ಕಿದ ಅಸ್ಥಿಪಂಜರದ ಮೂಳೆಗಳನ್ನು (Skeletal Remains) ಬೆಂಗಳೂರಿನ (Bengaluru) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡಕ್ಕೆ ನೇತ್ರಾವತಿ ತಟದ ಪಾಯಿಂಟ್ 6ರಲ್ಲಿ ಕೆಲ ಅಸ್ಥಿಪಂಜರದ ಮೂಳೆಗಳು, ತಲೆಬುರುಡೆ ಸಿಕ್ಕಿವೆ. ಸುಮಾರು 25 ಮೂಳೆಗಳನ್ನು ಎಸ್‌ಐಟಿ ತಂಡ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಪಾಯಿಂಟ್ ನಂ.1ರಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು; ವಾರಸುದಾರರು ಪತ್ತೆ
ಬೆಂಗಳೂರಿನ ಪ್ರಯೋಗಾಲಯದಲ್ಲಿ ಮೂಳೆಗಳ ಲಿಂಗತ್ವ ಪರೀಕ್ಷೆ, ವಯಸ್ಸು, ಎತ್ತರ, ಗಾತ್ರ ಪತ್ತೆ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್ ಎಚ್ಚರಿಕೆ
ಅಸ್ಥಿಪಂಜರದ ವಯಸ್ಸು ಮತ್ತು ಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ಎಫ್‌ಎಸ್‌ಎಲ್ ಪರೀಕ್ಷೆ ನಡೆಸಲಾಗುತ್ತದೆ. ಅಸ್ಥಿಪಂಜರ ಒಟ್ಟಾಗಿ ಸಿಕ್ಕರೇ, ಅದರಿಂದ ಲಿಂಗ, ಅಂದಾಜು ವಯಸ್ಸು, ಎತ್ತರ ಮತ್ತು ಅನೇಕ ಸಂದರ್ಭಗಳಲ್ಲಿ ಸಾವಿಗೆ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಬಹುದು.
ಪತ್ತೆ ಹೇಗೆ?
ಅಸ್ಥಿಪಂಜರ ಒಟ್ಟಾಗಿ ಸಿಕ್ಕರೇ ಸಾವಿನ ಸಂಭವನೀಯ ಕಾರಣ ತಿಳಿಯಬಹುದು. ಮೃತನ ಲಿಂಗ, ಅಂದಾಜು ವಯಸ್ಸು, ಎತ್ತರ ಪತ್ತೆ ಮಾಡಬಹುದು. 22 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ ಮೌಲ್ಯಮಾಪನ ನಿಖರವಾಗಿರಬಹುದು. ಮೂಳೆಗಳಿಂದ ದೇಹದ ಮೇಲೆ ಗಾಯವಾಗಿದ್ದರೆ ಪತ್ತೆ ಮಾಡಲು ಸಾಧ್ಯವಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್| ದಾರಿ ಬಿಡಿ ಮುಂದಕ್ಕೆ ಹೋಗಬೇಕು: ಪ್ರಣಬ್ ಮೊಹಂತಿ
ದವಡೆ ಹಲ್ಲು, ಉದ್ದನೆಯ ಮೂಳೆಯಿಂದ ಮೃತನ ಗುರುತು ಪತ್ತೆ ಮಾಡಬಹುದು. ಮೂಳೆಯ ಡಿಎನ್‌ಎ ಮಾದರಿ ಜೊತೆ ಮೃತನ ಕುಟುಂಬದೊಂದಿಗೆ ಹೋಲಿಕೆ ಮಾಡಬಹುದು.