ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್‌ಗಳು ಸಹ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅನ್ನಿಸುತ್ತದೆ ಎಂದು ನಟಿ ಅದಿತಿ ಪ್ರಭುದೇವ (Aditi Prabhudeva) ಖಡಕ್ಕಾಗಿ ಮಾತನಾಡಿದ್ದಾರೆ.
ನಟಿ ರಮ್ಯಾಗೆ (Ramya) ಅಶ್ಲೀಲ ಕಾಮೆಂಟ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಸಿನಿಮಾ ತಾರೆಯರಿಗೆ ಹೀರೋಯಿನ್ಸ್ ಅಂತಲ್ಲ. ಸೋಶಿಯಲ್ ಮೀಡಿಯಾ ಅಂದ ಮೇಲೆ ಇದೆಲ್ಲ ಇರುತ್ತದೆ. ನಾನು ವೈಯಕ್ತಿಕವಾಗಿ ಬ್ಯಾಡ್ ಕಾಮೆಂಟ್ಸ್ ಅನುಭವಿಸಿಲ್ಲ. ಹುಡುಗರು ಬಿಟ್ಟಾಕಿ, ಹುಡುಗಿಯರೂ ಕೂಡ ಕಾಮೆಂಟ್ ಮಾಡೋದು ಇದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ ಡಿಮ್ಯಾಂಡ್
ಇವರಿಗೆಲ್ಲ ಫೇಕ್ ಅಕೌಂಟ್ ಮಾಡಿ ಈ ರೀತಿ ಕೆಟ್ಟ ಕಾಮೆಂಟ್ ಮಾಡೋದ್ರಿಂದ ಏನು ಸಿಗುತ್ತೋ ಗೊತ್ತಿಲ್ಲ. ಇದನ್ನೆಲ್ಲ ಇಗ್ನೋರ್ ಮಾಡೋದು ಒಳಿತು. ನನಗೆ ವೈಯಕ್ತಿಕವಾಗಿ ಈ ರೀತಿ ಆಗಿಲ್ಲ. ಆದರೆ ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್‌ಗಳು ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅಂತ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ‘ಎಲ್ಲಾ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ’ ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್
ನಮಗೂ ಸಾಮಾನ್ಯ ಜ್ಞಾನ ಇರಬೇಕು. ನಮ್ಮ ಮನೆಯಲ್ಲೇ ರಕ್ತ ಹಂಚಿಕೊಂಡು ಹುಟ್ಟಿರೋರ ನಡುವೆಯೇ ವೈಮನಸ್ಸು ಇರುತ್ತದೆ. ಕೆಲವು ಚಿಕ್ಕಪುಟ್ಟ ಸಮಸ್ಯೆಗಳೂ ಇರುತ್ತದೆ. ಆದರೆ ಅನಾವಶ್ಯಕ ಇದೆಲ್ಲಾ ಯಾಕಪ್ಪಾ? ನಮ್ದು ಒಂದು ಫ್ಯಾಮಿಲಿ ಇರುತ್ತದೆ ಎಂದಿದ್ದಾರೆ.
ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡು ಸ್ಟಾರ್ ನಟರ ಅಭಿಮಾನಿ ಹೆಸರಲ್ಲಿ ಕಾಮೆಂಟ್ ಮಾಡುವ ಗೀಳು ಹೆಚ್ಚಾಗಿದೆ. ಸಂಬಂಧಪಟ್ಟ ನಟನ ಫ್ಯಾನ್ಸ್ ಬಳಗ ಪ್ರಸ್ತುತ ಘಟನೆಗಳ ಬಗ್ಗೆ ದನಿ ಎತ್ತುವ ನಟ ನಟಿಯರನ್ನ ಟಾರ್ಗೆಟ್ ಮಾಡುತ್ತಿದೆ ಅನ್ನೋ ಆರೋಪವಿದೆ. ನಟಿ ರಮ್ಯಾ ಈ ಕುರಿತು ಕಾನೂನು ಹೋರಾಟವನ್ನೂ ಪ್ರಾರಂಭಿಸಿದ್ದಾರೆ. ನಟ ಪ್ರಥಮ್ ಸೇರಿದಂತೆ ಹಲವರು ದೂರನ್ನೂ ದಾಖಲಿಸಿದ್ದಾರೆ. ಅಲ್ಲದೇ ನಿರ್ಮಾಪಕರು ಮುಂದೆ ಬಂದು ನಟರಿಗೆ ಬುದ್ಧಿ ಹೇಳುವಂತೆ ಕಲಾವಿದರ ಸಂಘಕ್ಕೂ ದೂರು ನೀಡಿದ್ದಾರೆ.