– ಶಿಕ್ಷಕಿ ಸಮೀರಾ ಫಾತಿಮಾ ವಂಚಕಿಯಾಗಿದ್ದು ಹೇಗೆ?
ಮುಂಬೈ: ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬರಲ್ಲ, ಇಬ್ಬರಲ್ಲ 8 ಪುರುಷರನ್ನು ಮದುವೆಯಾಗಿ ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸಮೀರಾ ಫಾತಿಮಾ ಎಂಬಾಕೆ ಅರೆಸ್ಟ್ ಆಗಿದ್ದಾಳೆ. 8 ಬಾರಿ ಮದುವೆಯಾಗಿ, ಲಕ್ಷಾಂತರ ರೂ. ವಸೂಲಿ ಮಾಡಿದ್ದಳು. 9ನೇ ಮದುವೆಯಾಗಲು ಮಾತುಕತೆಗೆ ಹೊರಟಿದ್ದಳು. ಈ ವೇಳೆ ಪೊಲೀಸರಿಗೆ ಲಾಕ್ ಆಗಿದ್ದಾಳೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: Malegaon Case | ಮೋಹನ್ ಭಾಗವತ್ ಬಂಧನಕ್ಕೆ ಆದೇಶಿಸಿದ್ದ ತನಿಖಾಧಿಕಾರಿ – ನಿವೃತ್ತ ಇನ್ಸ್‌ಪೆಕ್ಟರ್ ಸ್ಫೋಟಕ ಹೇಳಿಕೆ
ಪೊಲೀಸರ ಆರಂಭಿಕ ತನಿಖೆಯಲ್ಲಿ ಆರೋಪಿ ಮಹಿಳೆ, ತನ್ನ ಗಂಡಂದಿರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ಬೇರೆ ಬೇರೆ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್ ಜೊತೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಸಮೀರಾ ವಿದ್ಯಾವಂತಳಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರು | ರೈಲ್ವೇ ಪ್ಲಾಟ್ಫಾರ್ಮ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಕಳೆದ 15 ವರ್ಷಗಳಿಂದ ಆಕೆ ಹಲವಾರು ಪುರುಷರನ್ನು ವಂಚಿಸಿದ್ದಾಳೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ.
ಈಕೆಯನ್ನು ನಂಬಿ ಮದುವೆಯಾದವರಲ್ಲಿ ಒಬ್ಬ 50 ಲಕ್ಷ ಹಾಗೂ ಮತ್ತೊಬ್ಬ 15 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಹಣವನ್ನು ಬ್ಯಾಂಕ್‌ಗೆ ವರ್ಗಾಯಿಸಿಕೊಂಡು ಸಮೀರಾ ವಂಚಿಸಿದ್ದಾಳೆ. ಫೇಸ್‌ಬುಕ್, ವೈವಾಹಿಕ ವೆಬ್‌ಸೈಟ್‌ಗಳ ಮೂಲಕ ಪುರುಷರನ್ನು ಪರಿಚಯ ಮಾಡಿಕೊಂಡು ಖೆಡ್ಡಾಗೆ ಬೀಳಿಸುತ್ತಿದ್ದಳು.