– ಇನ್ನೆರಡು ದಿನಗಳಲ್ಲಿ ಎಲ್ಲಾ ಪಾಯಿಂಟ್ ಪೂರ್ಣಗೊಳಿಸಲು ಎಸ್‌ಐಟಿ ಸಿದ್ಧತೆ
ಮಂಗಳೂರು: ಧರ್ಮಸ್ಥಳ ಫೈಲ್ಸ್‌ಗೆ (Dharmasthala Burials Case) ಮಹತ್ವದ ಟ್ವಿಸ್ಟ್ ಸಿಕ್ಕಿದೆ. 6ನೇ ಪಾಯಿಂಟ್‌ನಲ್ಲಿ 12 ಮೂಳೆಗಳು ಪತ್ತೆಯಾಗುವ ಮೂಲಕ ಅನಾಮಿಕನ ದೂರಿಗೆ ಬಲ ಬಂದಿದೆ. ಕತ್ತಲು ಕವಿಯುವವರೆಗೂ ನಡೆದ ಈ ಕಾರ್ಯಾಚರಣೆ ಅನೇಕ ಕುತೂಹಲಗಳನ್ನು ತೆರೆದಿಟ್ಟಿದೆ. ಇಂದು ಮತ್ತೆ ಉತ್ಖನನ ಮುಂದುವರಿಯಲಿದೆ.
ಧರ್ಮಸ್ಥಳ (Dharmasthala) ಗ್ರಾಮದ ನೇತ್ರಾವತಿ ನದಿಯ ಸುತ್ತ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭಿಕ 5 ಪಾಯಿಂಟ್‌ಗಳಲ್ಲಿ ಯಾವುದೇ ಮೂಳೆಯ ಕುರುಹು ಸಿಗದೇ ಇದ್ದಾಗ, ಅನಾಮಿಕ ದೂರುದಾರನ ಆರೋಪಗಳ ಬಗ್ಗೆನೇ ಸಂಶಯಗಳು ಎದ್ದಿದ್ವು.. ಇದೀಗ ಆರನೇ ಪಾಯಿಂಟ್‌ನಲ್ಲಿ ಮೂಳೆಗಳ ಕುರುಹು ಸಿಕ್ಕಿದೆ. ಸಿಕ್ಕಿರುವ ಮೂಳೆಗಳು ಪುರುಷನದ್ದು ಎನ್ನಲಾಗಿದೆ. ಉತ್ಖನನ ವೇಳೆ ಸಿಕ್ಕ 12 ಮೂಳೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಇದನ್ನೂ ಓದಿ: PublicTV Impact; ಆಗ ಗುತ್ತಿಗೆ ನೌಕರ, ಈಗ ಕೋಟ್ಯಧಿಪತಿ – ಕೆಆರ್‌ಐಡಿಎಲ್ ಮಾಜಿ ಹೊರಗುತ್ತಿಗೆ ನೌಕರನ ಮೇಲೆ ‘ಲೋಕಾ’ ತನಿಖೆ
ಗುರುವಾರ ನಡೆದ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಅರಣ್ಯ ಪ್ರದೇಶದಲ್ಲಿ ಸಾಗಿ 6ನೇ ಪಾಯಿಂಟ್ ಅಗೆದಿದ್ರು. ನದಿ ತೀರದ ಪಾಯಿಂಟ್ ಬಗ್ಗೆ ದೂರುದಾರಿಗೆ ವಿಶೇಷ ಆತ್ಮವಿಶ್ವಾಸ ಇತ್ತು. ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು ಮೂರೇ ಅಡಿ ಅಗಿಯುವಾಗ ಎರಡು ಮೂಳೆಗಳು ಪತ್ತೆಯಾಗಿವೆ. ಹಿಟಾಚಿ ಬಳಸಿಕೊಂಡು ಮತ್ತಷ್ಟು ಆಳಕ್ಕಿಳಿದಾಗ ಒಟ್ಟು 12 ಮೂಳೆಗಳು ಕಂಡುಬಂದಿವೆ. ಮೂಳೆಗಳು ಸಿಗುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಹಾಗೂ ಎಫ್‌ಎಸ್‌ಎಲ್ ತಜ್ಞರನ್ನು ಬಳಸಿಕೊಂಡು ಎಲ್ಲಾ ಮೂಳೆಗಳನ್ನು ಸಂರಕ್ಷಿಸಲಾಗಿದೆ. ಮೂಳೆ ಸಿಕ್ಕ ಪಾಯಿಂಟ್‌ನಲ್ಲಿ ನೀರಿನ ಒರತೆ ಹೆಚ್ಚಿದ್ದ ಕಾರಣ, ತಗಡಿನ ಸೀಟುಗಳನ್ನು ಬಳಸಿ ಶೆಲ್ಟರ್ ಮಾಡಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಪಾಯಿಂಟ್ ನಂ.1ರಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು – ವಾರಸುದಾರ ಮಹಿಳೆ ಇನ್ನೂ ಜೀವಂತ
ಇಂದು ಬೆಳಗ್ಗೆ 7ನೇ ಪಾಯಿಂಟ್‌ನಿಂದ ಮತ್ತೆ ಅಗೆಯುವ ಕಾರ್ಯ ಆರಂಭವಾಗಲಿದೆ. ಜೊತೆಗೆ 8ನೇ ಪಾಯಿಂಟ್‌ನ ಬಳಿ ಎಲ್ಲಾ ಸಿದ್ಧತಾ ಕಾರ್ಯ ನಡೆದಿದೆ. ಮತ್ತೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದ್ದು ಮುಂದಿನ ಎರಡು ದಿನದಲ್ಲಿ ಎಲ್ಲಾ ಪಾಯಿಂಟ್‌ಗಳಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಇಂದು ನಡೆಸೋ ಉತ್ಖನನದಲ್ಲಿ ಮತ್ತಷ್ಟು ಕಳೇಬರ ಸಿಕ್ರೆ ಈ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್- ವಿಕಾಸ್ ಕುಮಾರ್ ಸಸ್ಪೆಂಡ್ ಆದೇಶ ವಾಪಸ್