6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

Public TV
2 Min Read
Pralhad Joshi

– ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆಗೆ 1920 ಕೋಟಿ ಹೆಚ್ಚುವರಿ ಹಣ
– 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
– 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕ ಸ್ಥಾಪನೆಗೆ 1,000 ಕೋಟಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆ (PMKSY) ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 15ನೇ ಹಣಕಾಸು ಆಯೋಗದಡಿ ಒಟ್ಟು 6,520 ಕೋಟಿ ರೂ. ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 15ನೇ ಹಣಕಾಸು ಆಯೋಗದಡಿ (2021-22 ರಿಂದ 2025-26) ನಡೆಯುತ್ತಿರುವ ಕೇಂದ್ರ ವಲಯದ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY) ಗಾಗಿ ಹೆಚ್ಚುವರಿ 1920 ಕೋಟಿ ಸೇರಿದಂತೆ ಒಟ್ಟು 6,520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಯಿತೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

cabinet meeting modi

ಆಹಾರ ಘಟಕಗಳಿಗೆ 1000 ಕೋಟಿ: ಕಿಸಾನ್‌ ಸಂಪದ ಯೋಜನೆ ಮೂಲಕ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಆಹಾರ ಮೌಲ್ಯವರ್ಧನ ಮೂಲಸೌಕರ್ಯ (ICCVAI) ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಯಗಳು ಹಾಗೂ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು 1000 ಕೋಟಿ ವೆಚ್ಚಕ್ಕೆ ಕೇಂದ್ರ ಅನುಮೋದನೆ ನೀಡಿದೆ.

ICCVAI ಮತ್ತು FSQAI ಇವೆರೆಡೂ PMKSYಯ ಬೇಡಿಕೆ ಆಧಾರಿತ ಘಟಕ ಯೋಜನೆಗಳಾಗಿವೆ. ಹಾಗಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಮೂಲಕ ವಿವಿಧ ಯೋಜನೆ ಮಂಜೂರಾತಿಗೆ 920 ಕೋಟಿ ಒದಗಿಸಿದೆ. ಪ್ರಸ್ತಾವಿತ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗುವುದು. ಇದರಿಂದ ವರ್ಷಕ್ಕೆ 20ರಿಂದ 30 ಲಕ್ಷ ಮೆಟ್ರಿಕ್ ಟನ್‌ ಆಹಾರ ಸಂರಕ್ಷಣಾ ಸಾಮರ್ಥ್ಯದ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಮೂರು ತಿಂಗಳಲ್ಲಿ ಶಾಸಕರ ಪಕ್ಷಾಂತರದ ಬಗ್ಗೆ ಕ್ರಮ ತೆಗೆದುಕೊಳ್ಳಿ – ತೆಲಂಗಾಣ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಸೂಚನೆ

ಖಾಸಗಿ ವಲಯದಡಿ ಪ್ರಸ್ತಾವಿತ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯಿಂದ ಆಹಾರ ಮಾದರಿ ಪರೀಕ್ಷೆ ಸುಲಲಿತವಾಗಲಿದೆ. ಅಲ್ಲದೇ, ಸುಧಾರಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದರಿಂದಾಗಿ ಆಹಾರ ಸುರಕ್ಷತೆ ಹಾಗೂ ಸುರಕ್ಷಿತ ಆಹಾರಗಳ ಪೂರೈಕೆಗೆ ಹೆಚ್ಚು ಹೆಚ್ಚು ನೆರವಾಗಲಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

Share This Article