ಬಿಜೆಪಿಯವರ ಅಧಿಕಾರ ದುರ್ಬಳಕೆ ಬಗ್ಗೆ ಜನರಿಗೆ ಹೇಳಲು ರಾಹುಲ್ ಗಾಂಧಿ ಪ್ರತಿಭಟನೆ: ಡಿಕೆ ಶಿವಕುಮಾರ್

Public TV
1 Min Read
RAHUL GANDHI DK SHIVAKUMAR

ಬೆಂಗಳೂರು: ಬಿಜೆಪಿಯವರು ಅಧಿಕಾರ ದುರುಪಯೋಗ, ಚುನಾವಣೆ ಆಯೋಗದ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಜನರಿಗೆ ತಿಳಿಸಲು ರಾಹುಲ್ ಗಾಂಧಿ (Rahul Gandhi) ಪ್ರತಿಭಟನೆ ಮಾಡ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಆಗಸ್ಟ್ 5ರಂದು ರಾಹುಲ್ ಗಾಂಧಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ (BJP) ಅವರು ಯಾವ ರೀತಿ ಅಧಿಕಾರ ದುರುಪಯೋಗ ಮಾಡಿಕೊಂಡು, ಎಲೆಕ್ಷನ್ ಕಮಿಷನ್ ಉಪಯೋಗ ಮಾಡಿಕೊಂಡು ಹೆಚ್ಚು ಕಡಿಮೆ ಮಾಡಿದ್ರು ಅನ್ನೋದನ್ನ ನಾವು ಬೆಳಕಿಗೆ ತರಬೇಕಿದೆ. ನಮ್ಮ ಪಕ್ಷದಿಂದ ಈ ಬಗ್ಗೆ ರಿಸರ್ಚ್ ಆಗಿದೆ. ನಮ್ಮ ನಾಯಕರು ರಾಜ್ಯದ ಜನತೆಗೆ ಈ ವಿಚಾರವನ್ನು ತಿಳಿಸುತ್ತಾರೆ. ನೀವು, ನಾವು ಎಚ್ಚರಿಕೆ ವಹಿಸಬೇಕು ಅನ್ನೋ ದೃಷ್ಟಿಯಿಂದ ನಾವು ಪ್ರತಿಭಟನೆ ಮಾಡ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆ ಅಕ್ರಮದ ಬಗ್ಗೆ ಪ್ರತಿಭಟನೆ ಮಾಡಲು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮನ: ಸಿದ್ದರಾಮಯ್ಯ

ಈಗ ದೇಶದಲ್ಲಿ ಆಗಿರೋದು ಆಗಿ ಹೋಗಿದೆ. ಆದ್ರೆ ಈ ವಿಚಾರ ಜನರಿಗೆ ಗೊತ್ತಾಗಬೇಕು. ಅದಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ. ನಿನ್ನೆ ಪ್ರಾಥಮಿಕ ಸಭೆ ಆಗಿದೆ. ಇವತ್ತು ಸುರ್ಜೇವಾಲ, ವೇಣುಗೋಪಾಲ್ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆಯಿಂದ ಸೂಚನೆ

ರ‍್ಯಾಲಿ ಮಾಡಬೇಕಾ? ಸಮಾವೇಶ ಮಾಡಬೇಕಾ ಎಂದು ಚರ್ಚೆ ಇದೆ. ಕೋರ್ಟ್ ತೀರ್ಪು ಕೂಡಾ ಪ್ರತಿಭಟನೆ, ರ‍್ಯಾಲಿಗೆ ಸಂಬಂಧಿಸಿದಂತೆ ಇದೆ. ನಮ್ಮ ಸರ್ಕಾರದ ಆದೇಶ ಇದೆ. ಇದರ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸಿಎಂ ಜೊತೆ ಡೆಲ್ಲಿಯವರು ಮಾತಾಡಿದ್ದಾರೆ. ನಾನು ಮಾತಾಡಿದ್ದೇನೆ ಅಂತ ಸ್ಪಷ್ಟಪಡಿಸಿದ್ದಾರೆ.

Share This Article