ಬದಲಾಗಲಿದೆ ಯುಪಿಐನ ಕೆಲ ನಿಯಮಗಳು – ಆ.1ರಿಂದ ಹೊಸ ನಿಯಮ ಜಾರಿ

Public TV
2 Min Read
upi apps

– ಕೆಲವು ರಿಚಾರ್ಜ್‌ಗಳಿಗೆ ಸಮಯ ನಿಗದಿ

ನವದೆಹಲಿ: ಯುಪಿಐ ಪೇಮೆಂಟ್ ಜನರ ಅವಿಭಾಜ್ಯ ಅಂಗವಾಗಿದೆ. ಕಿರಿಯರಿಂದ ವೃದ್ಧರವರೆಗೂ ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕ್ಯಾಶ್ ಲೆಸ್ ವ್ಯವಹಾರದ ಸಂಖ್ಯೆ ಹೆಚ್ಚಾದ ಹಿನ್ನೆಲೆ, ನಾಳೆಯಿಂದ ಯುಪಿಐ ಪೇಮೆಂಟ್‌ನಲ್ಲಿ ಕೆಲ ಪ್ರಮುಖ ಬದಲಾವಣೆಯಾಗಲಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಜಾರಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮುಂದಾಗಿದೆ. ಈ ಹೊಸ ಮಾರ್ಗಸೂಚಿಗಳು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಡಿಜಿಟಲ್ ಪಾವತಿ ಆಪ್‌ಗಳಿಗೆ ಅನ್ವಯವಾಗಲಿವೆ. ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ. ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ ಇರಲಿದೆ. ಅದಲ್ಲದೇ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿರಲಿದೆ. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ 8.7 ತೀವ್ರತೆಯ ಭಾರೀ ಭೂಕಂಪ – ಅಮೆರಿಕ, ಜಪಾನ್‌ಗೆ ಸುನಾಮಿ ಎಚ್ಚರಿಕೆ

ಇನ್ನೂ ಬ್ಯಾಲೆನ್ಸ್ ಚೆಕ್ ಮಾಡುವುದರ ಜೊತೆಗೆ ಓಟಿಟಿ ಸೇರಿದಂತೆ ಮೊಬೈಲ್ ರಿಚಾರ್ಜ್‌ಗಳ ಆಟೋ ಪೇಗೆ ಸಮಯ ನಿಗದಿಯಾಗಿದ್ದು, ಆ ಸಮಯ ಸಂಧರ್ಭದಲ್ಲಿ ಮಾತ್ರ ಪಾವತಿಗೆ ಅವಕಾಶ ಇರಲಿದೆ. ಮೂರು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪೀಕ್ ಅವರ್‌ಗಳಲ್ಲಿ ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಪಾವತಿಗಳನ್ನು ಬೆಳಗ್ಗೆ 10 ಗಂಟೆಗೂ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9.30ರ ನಂತರ ಮಾತ್ರ ಆಟೋ ಪೇ ಪ್ರಕ್ರಿಯೆ ನಡೆಯಲಿದೆ. ಇಷ್ಟೇ ಅಲ್ಲ ವಹಿವಾಟು ಬಾಕಿ ಉಳಿದಿರೋದನ್ನ ಪರಿಶೀಲನೆ ಮಿತಿಯನ್ನು ಮೂರು ಬಾರಿಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡ್ ಅಂತರ ಇರಲೇಬೇಕು. ಈ ನಿಯಮವು ಬಳಕೆದಾರರಿಗೆ ಕೊಂಚ ಅನೂನುಕೂಲ ಉಂಟು ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

ಒಟ್ಟಾರೆ ಯುಪಿಐ ನಿಯಮಗಳ ಬದಲಾವಣೆ ಬಳಕೆದಾರರ ದೈನಂದಿನ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲ್ಲ. ಆದರೆ ಸರ್ವರ್ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ರಷ್ಯಾ | ಮಿಲಿಟರಿ ಡ್ರೋನ್‌ ತಯಾರಿಕೆಗೆ ಮಕ್ಕಳ ಬಳಕೆ – ಆಟದ ಜೊತೆಗೆ‌ ಸಕತ್ ಟ್ಯಾಲೆಂಟ್!

Share This Article