7 ದಿನ, 170 ಗಂಟೆ ಭರತನಾಟ್ಯ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ರೆಮೋನಾ ಪಿರೇರಾ

Public TV
1 Min Read
Remona Evette Pereira Mangaluru Bharatanatyam

ಮಂಗಳೂರು: ಪ್ರಧಾನಮಂತ್ರಿ ಬಾಲ ಪುರಸ್ಕಾರ ಪುರಸ್ಕೃತೆ ಮಂಗಳೂರಿನ ಸಂತ ಅಲೋಶಿಯನ್ ಕಾಲೇಜಿನ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ರೆಮೋನಾ ಎವೆಟ್ಟೆ ಪಿರೇರಾ (Remona Evette Pereira) 7 ದಿನಗಳ ಕಾಲ 170 ಗಂಟೆ ಭರತನಾಟ್ಯ (Bharatanatyam) ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Golden Book of World Records) ದಾಖಲೆ ಮಾಡಿದ್ದಾರೆ.

ಜುಲೈ 21 ರಂದು ಬೆಳಗ್ಗೆ 10:30ರಿಂದ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದು, ಜು.28ರಂದು ಮುಕ್ತಾಯವಾಗಿದೆ. ಈ ಏಳು ದಿನಗಳಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ಮಾಡಿದ್ದು, ಪ್ರದರ್ಶನದ ಪ್ರತಿ ದಿನ ರಾತ್ರಿ ಒಂದು ಗಂಟೆ ಹಾಗೂ ಮೂರು ಗಂಟೆಗೊಮ್ಮೆ 15 ನಿಮಿಷಗಳ ಕಾಲ ಮಾತ್ರ ವಿರಾಮ ಇರಲಿದೆ. ಈ ಸಮಯದಲ್ಲಿ ಕನಿಷ್ಟ ಪ್ರಮಾಣದ ಆಹಾರ ಸೇವಿಸುತ್ತಾಳೆ ರೆಮೋನಾ. ನಿರಂತರ ವೈದ್ಯರ ಸಲಹೆ, ಫಿಸಿಯೋಥೆರಪಿ ಆರೈಕೆಯೊಂದಿಗೆ ಈ ಪ್ರದರ್ಶನ ನಡೆಸಿದ್ದಾಳೆ. ಇದನ್ನೂ ಓದಿ: ಶಿರಡಿಗೆ ಹೋಗಿದ್ದಾಗ ಕೃಷಿ ಅಧಿಕಾರಿ ಮನೆ ಬೀಗ ಮುರಿದು ಕಳ್ಳತನ: 26 ಲಕ್ಷದ ಚಿನ್ನಾಭರಣ ಕದ್ದು ಪರಾರಿ

ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪ್ಪು ಜತಿಸ್ವರ, ವರ್ಣ, ಪದವರ್ಣ, ತಿಲ್ಲಾನಗಳೊಂದಿಗೆ ಲಘು ಶಾಸ್ತ್ರೀಯ, ದೇವರನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ ರೆಮೋನಾ. ಈ ಹಿಂದೆ ಮಹಾರಾಷ್ಟ್ರದ ಸೃಷ್ಟಿ ಸುಧೀರ್ ಜಗತಾಪ್ ಎಂಬ 16 ವರ್ಷದ ಬಾಲಕಿ ನಿರಂತರ 127 ಗಂಟೆ ಕಥಕ್ ನೃತ್ಯ ಪ್ರದರ್ಶನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದಳು. ಇದೀಗ ರೆಮೋನಾ ಈ ದಾಖಲೆಯನ್ನು ಮುರಿದು 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಮಾಡಿದ್ದಾಳೆ. ಈಕೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾದ ಮುಖ್ಯಸ್ಥ ಡಾ.ಮನೀಶ್ ವಿಷ್ನೋಯಿ ಅವರು ನೂತನ ದಾಖಲೆಯ ಪ್ರಮಾಣ ಪತ್ರ ಹಸ್ತಾಂತರಿಸಿದ್ದಾರೆ.  ಇದನ್ನೂ ಓದಿ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

Share This Article