ದಾವಣಗೆರೆ: ಮಲೆನಾಡು ಭಾಗದಲ್ಲಿ ನಿರಂತರ ಮಳೆ (Rain) ಸುರಿಯುತ್ತಿರುವ ಪರಿಣಾಮ ದಾವಣಗೆರೆ (Davanagere) ಮೂಲಕ ಹರಿಯುವ ತುಂಗಭದ್ರಾ ನದಿ (Tungabhadra River) ಅಪಾಯಮಟ್ಟ ಮೀರಿ ಹರಿಯುತ್ತಿದೆ.
ಭದ್ರಾದಿಂದ 39 ಸಾವಿರ ಕ್ಯೂಸೆಕ್ ಹಾಗೂ ತುಂಗಾದಿಂದ 68 ಸಾವಿರ ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಜಾಗೃತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ ನೀರು ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಆರೋಗ್ಯ ಸ್ಥಿತಿ ಗಂಭೀರ – ಬೆಂಗಳೂರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ
ಇನ್ನು ತುಂಗಭದ್ರಾ ನದಿಯ ನೀರು ನುಗ್ಗುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಹೊನ್ನಾಳಿ ನ್ಯಾಮತಿ ಹಾಗೂ ಹರಿಹರಗಳಲ್ಲಿ ಕಾಳಜಿಕೇಂದ್ರ ಸ್ಥಾಪಿಸಲಾಗಿದ್ದು, ಹೊನ್ನಾಳಿ ಪಟ್ಟಣದ ಬಾಲ್‌ರಾಜ್ ಘಾಟ್‌ನಲ್ಲಿ 8 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಹರಿಹರ ಪಟ್ಟಣದ ಗಂಗಾನಗರದಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲದೇ ನ್ಯಾಮತಿ ಹಾಗೂ ಚೀಲುರು ಗ್ರಾಮಗಳಲ್ಲಿ ಕೂಡ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ನದಿ ಪಾತ್ರಕ್ಕೆ ಜನ ಜಾರುವಾರುಗಳು ಇಳಿಯದಂತೆ ಸೂಚಿಸಲಾಗಿದೆ. ಇದನ್ನೂ ಓದಿ: ರಮ್ಯಾ ವಿರುದ್ಧ `ಡಿ’ ಫ್ಯಾನ್ಸ್‌ನಿಂದ ಕೆಟ್ಟ ಕಾಮೆಂಟ್ಸ್; ಕಾನೂನು ಹೋರಾಟಕ್ಕೆ ಮುಂದಾದ ಮೋಹಕ ತಾರೆ