ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

Public TV
3 Min Read
Pratham

– ದರ್ಶನ್‌ ಸರ್‌ ಒಳ್ಳೆಯವರ ಸಹವಾಸ ಮಾಡಿ; ನಯವಾಗಿಯೇ ಟಾಂಗ್‌ ಕೊಟ್ಟ ನಟ

ಬೆಂಗಳೂರು: ಗೂಂಡಾಗಿರಿ ಬಿಟ್ಟುಬಿಡಿ.. ಬಾಸಿಸಂ ನಡೆಯಲ್ಲ… ಈ ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ ಅಂತ ನಟ ಒಳ್ಳೆ ಹುಡುಗ ಪ್ರಥಮ್‌ (Pratham) ದರ್ಶನ್‌ ಅಭಿಮಾನಿಗಳಿಗೆ (Darshan Fans) ವಾರ್ನಿಂಗ್‌ ಕೊಟ್ಟಿದ್ದಾರೆ.

ಯೆಸ್‌. ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದೊಡ್ಡಬಳ್ಳಾಪುರ (Doddaballapura) ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಡ್ರ್ಯಾಗರ್‌ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ದರ್ಶನ್‌ ಅಭಿಮಾನಿಗಳು ಅಂತ ಹೇಳಿಕೊಂಡು ಕೆಲವರು ಬೆದರಿಕೆ ಹಾಕಿದ್ದರು ಎಂಬುದಾಗಿ ನಟ ಆರೋಪ ಮಾಡಿದ್ದರು. ಈ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಪ್ರಥಮ್‌, ದರ್ಶನ್‌ ಅಭಿಮಾನಿಗಳಿಗೆ ನಯವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

ಗೂಂಡಾಗಿರಿ ಬಿಟ್ಟುಬಿಡಿ.. ಬಾಸಿಸಂ ನಡೆಯಲ್ಲ.. ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ. ಎಲ್ಲಾ ಹೆಸ್ರುಗಳು ಹೇಳಿದ್ರೆ ಇಷ್ಟೊತ್ತಿಗೆ ಏನೇನೋ ಆಗ್ತಿತ್ತು. ಬೆಂಕಿ ಹೊತ್ತಿಕೊಳ್ತಿತ್ತು. ದರ್ಶನ್ ಸರ್ ನಿಮ್ ಹುಡುಗ್ರುಗೆ ಹೇಳಿ. ಇಲ್ಲಿಯವರೆಗೆ ಪ್ರಥಮ್ ಹಾಸ್ಯ, ತುಂಟಾಟ ಮಾತ್ರ ನೋಡಿದ್ದಾರೆ. ಹಾಗೆಯೇ ನೋಡಿದ್ರೆ ಚೆಂದ. ಪ್ರೀತಿಯಿಂದ ಹೇಳ್ತಿದ್ದೀನಿ ಸರ್‌.. ನಿಮ್ಮ ಅಭಿಮಾನಿಗಳಿಗೆ ಹೇಳಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ

ದರ್ಶನ್‌ ಹೆಸರನ್ನ ಮಿಸ್‌ಯೂಸ್‌ ಮಾಡಿಕೊಳ್ತಿದ್ದಾರೆ
ದರ್ಶನ್ ಹೆಸರನ್ನ ಅಭಿಮಾನಿಗಳು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ. ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ. ಕರ್ನಾಟಕದಲ್ಲಿ ಕನ್ನಡ ಬಾಸ್‌… ಕನ್ನಡಿಗರು ನನಗೆ ಬಾಸ್‌.. ಅವರವರ ಅಪ್ಪ-ಅಮ್ಮ ಅವರಿಗೆ ಬಾಸ್‌. ಯಾರಾದ್ರೂ ಯಾರಾದ್ರೂ ಮೀಡಿಯಾಗೆ ಏನ್ರಿ ಮೀಡಿಯಾ ಅಂದ್ರೆ… ಕಿರಿಟಕ್ಕೆ ಸಮಾನ ಅನ್ನಬೇಕು ಕಲಾವಿದರು. ಮೀಡಿಯಾದಿಂದ ಅನ್ನ ತಿಂತಿದಿವಿ ಅಂತ ದರ್ಶನ್‌ ಅಭಿಮಾನಿಗಳನ್ನ ಕುಟುಕಿದ್ದಾರೆ. ಇದನ್ನೂ ಓದಿ: Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ

ದರ್ಶನ್ ಸರ್ ವಿ ಲವ್‌ ಯು ಸರ್‌, ನೀವು ಚೆನ್ನಾಗಿ ಬದುಕಿ ಎಂದರಲ್ಲದೇ ಶಿವಣ್ಣ, ಸುದೀಪ್‌ಗೆ ಒಳ್ಳೆದಾಗ್ಲಿ. ಅವ್ರು ದೊಡ್ಡ ಕಲಾವಿದರು ಎನ್ನುತ್ತಲೇ ದರ್ಶನ್‌ಗೆ ತಿವಿದಿದ್ದಾರೆ. ರಕ್ಷಕ್ ನನ್ನ ಸ್ನೇಹಿತ.. ತಮ್ಮ.. ಅವನು ಕಲಿತುಕೊಳ್ತಾನೆ. ದರ್ಶನ್‌ ಸರ್‌ ನಿಮ್ಮ ಹಡುಗ್ರುಗೆ ಸರಿಯಾಗಿ ಇರೋಕೆ ಹೇಳಿ ದರ್ಶನ್ ಸರ್. ನಮ್ಗೂ ಬದುಕು ಮುಖ್ಯ. ಪ್ರಥಮ್ ಕೋಪ ಮಾಡಿಕೊಂಡ್ರೆ… ಎಚ್ಚರಿಕೆ ಕೊಟ್ಟಿದ್ದಾರೆ.

ಅಲ್ಲಿ ಏನಾಯ್ತು ಅಂತ ಹೇಳಿಕೆ ಕೊಟ್ರೆ ಬೇರೆ ಏನೇನೋ ಆಗುತ್ತೆ. ದರ್ಶನ್ ಸರ್ ಯೋಗ್ಯರ ಸಹವಾಸ ಮಾಡಿ. ಗೂಂಡಾಗಳನ್ನ ಸಾಕುವ ಬದಲು ಮನೆಯಲ್ಲಿ ನಾಯಿ ಸಾಕಿ, ಗಿಳಿ ಸಾಕಿ, ಪಾರಿವಾಳ ಸಾಕಿ ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ʻನಾನೇ ನೀನಂತೆʼ ಹಾಡಿಗೆ ಮೆಚ್ಚುಗೆಯ ಸುರಿಮಳೆ

Pratham 01

ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡೊಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.

Share This Article