ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆ ವೇಳೆ ಮೂರ್ಛೆ ಹೋದ ಮಹಿಳೆ – ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬುಲೆನ್ಸ್‌ನಲ್ಲೇ ಗ್ಯಾಂಗ್‌ ರೇಪ್‌

Public TV
1 Min Read
AMBULANCE

ಪಾಟ್ನಾ: ಗೃಹರಕ್ಷಕ ದಳ (Home Guard) ನೇಮಕಾತಿ ವೇಳೆ ಮೂರ್ಛೆ ಹೋದ 26 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ (Bihar) ಬೋಧ್ ಗಯಾದಲ್ಲಿ ನಡೆದಿದೆ.

ಆಂಬ್ಯುಲೆನ್ಸ್ (Ambulance) ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಬಂಧಿತರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯುವತಿ ಮಾತು ನಂಬಿ ಬಂದ ಯುವಕನ ಕಿಡ್ನ್ಯಾಪ್‌; 2.50 ಕೋಟಿಗೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಅರೆಸ್ಟ್

CRIME

ಏನಾಗಿತ್ತು?
ಇದೇ ಜುಲೈ 24ರಂದು ಬೋಧ್‌ ಗಯಾದ ಬಿಹಾರ ಮಿಲಿಟರಿ ಪೊಲೀಸ್‌ ಮೈದಾನದಲ್ಲಿ ಗೃಹರಕ್ಷಕ ದಳದ ನೇಮಕಾತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಮಹಿಳೆ ಮೂರ್ಛೆ ಹೋಗಿದ್ದಳು. ಇದರಿಂದ ತರಬೇತಿ ಕ್ಯಾಂಪಸ್‌ನಲ್ಲೇ ಇದ್ದ ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು. ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪ್ರಜ್ಞಾಹೀನಳಾಗಿದ್ದ ನನ್ನ ಮೇಲೆ ಕೆಲ ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಂತ್ರಸ್ತೆ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆಗಾಗಿ ವಿಶೇಷ ತಂಡ ಮತ್ತು ವಿಧಿವಿಜ್ಞಾನ ತಂಡವನ್ನ ನಿಯೋಜನೆ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಅಂಬುಲೆನ್ಸ್‌ ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಇಬ್ಬರನ್ನು ತನಿಖಾ ತಂಡ ಬಂಧಿಸಿತು. ಸದ್ಯ ಇಬ್ಬರು ಪೊಲೀಸ್‌ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

Share This Article