ಕೊಡಗು: ಜಾನುವಾರುಗಳ ಕಳ್ಳ ಸಾಗಾಟಗಾರರ ವಿರುದ್ಧ ಅಕ್ರೋಶಗೊಂಡ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.
- Advertisement 2-
ಸೋಮವಾರಪೇಟೆ ತಾಲೂಕಿನ ತೋರೆನೂರು ಗ್ರಾಮದ ಬಳಿಯಿಂದ ಟೆಂಪೋ ಟ್ರಾವೆಲರ್‍ನಲ್ಲಿ ದನಗಳನ್ನು ಅಕ್ರಮವಾಗಿ ಮಂಗಳೂರಿಗೆ ಸಾಗಾಟ ಮಾಡಲಾಗ್ತಿತ್ತು. ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಟಿಟಿ ವಾಹನ ಚೇಸ್ ಮಾಡುವ ಸಂದರ್ಭದಲ್ಲಿ ಹಿಂಬಾಲಿಸುತ್ತಿದ್ದ ಪೊಲೀಸರ ಬೈಕ್‍ಗೆ ಟಿಟಿ ವಾಹನದ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಸುಮಾರು 20 ಕಿಲೋಮೀಟರ್ ವಾಹನ ಹಿಂಬಾಲಿಸಿದ ಪೊಲೀಸರು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement 3-
- Advertisement 4-
ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗು ಸಾರ್ವಜನಿಕರು ಟೆಂಪೋಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಮಂಗಳೂರು ಮೂಲದವರು ಎನ್ನಲಾದ ಷರೀಫ್ ಹಾಗು ಮನ್ಸೂರ್ ಎಂಬವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.