ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.ಇದನ್ನೂ ಓದಿ: UGCET/NEET: ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ
ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ದಂಡ ಶುಲ್ಕ ಮತ್ತು ವಿಶೇಷ ದಂಡ ಶುಲ್ಕದೊಂದಿಗೆ ಜು.31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ದಂಡ ಶುಲ್ಕ 670 ರೂ. + ವಿಶೇಷ ದಂಡ ಶುಲ್ಕ 2,220 ರೂ. ಸೇರಿ ಒಟ್ಟು 2,890 ರೂ. ಪಾವತಿ ಮಾಡಿ ದಾಖಲಾಗಬಹುದು ಎಂದು ತಿಳಿಸಿದೆ.
ಇತ್ತೀಚಿಗಷ್ಟೇ ಜು.23ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ 3ರ ಫಲಿತಾಂಶ ಪ್ರಕಟವಾಗಿತ್ತು. 2,093,74 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 42,085 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಒಟ್ಟು 8,683,85 ವಿದ್ಯಾರ್ಥಿಗಳ ಪೈಕಿ 6,452,73 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಹಿನ್ನೆಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಾಖಲಾತಿ ದಿನಾಂಕವನ್ನು ವಿಸ್ತರಣೆ ಮಾಡಿದೆ.ಇದನ್ನೂ ಓದಿ: ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – ಅಗ್ನಿವೀರ್ ಹುತಾತ್ಮ, ಇಬ್ಬರು ಸೈನಿಕರಿಗೆ ಗಾಯ