ಬಿಕ್ಲು ಶಿವ ಕೊಲೆ ಕೇಸ್; ಬಂಧಿತ ಹಂತಕರ ಮೇಲೆ ರೌಡಿಶೀಟ್‌ ತೆರೆದ ಪೊಲೀಸರು

Public TV
1 Min Read
biklu shiva 1

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಮಾಡಿ ಬಂಧನವಾಗಿರುವ ಹಂತಕರ ವಿರುದ್ಧ ಪೊಲೀಸರು ರೌಡಿಶೀಟ್‌ ತೆರೆದಿದ್ದಾರೆ.

ಬಂಧಿತ 17 ಮಂದಿ ಆರೋಪಿಗಳಲ್ಲಿ 9 ಮಂದಿ ವಿರುದ್ಧ ರೌಡಿಶೀಟ್‌ ತೆರೆಯಲಾಗಿದೆ. ಕಿಂಗ್‌ಪಿನ್ ಕಿರಣ್, ಮದನ್, ವಿಮಲ್, ಪ್ರದೀಪ್, ಪ್ಯಾಟ್ರಿಕ್, ಸ್ಯಾಮ್ಯುಯೆಲ್, ಸೇರಿ 9 ಮಂದಿಯ ವಿರುದ್ಧ ರೌಡಿ ಪಟ್ಟಿಯನ್ನ ಭಾರತಿ ನಗರ ಪೊಲೀಸರು ತೆರೆದಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

ಕೊಲೆ ಕೇಸ್ ಸೇರಿದಂತೆ ಬಂಧಿತರ ಮೇಲೆ ಹಲವು ಕೇಸ್‌ಗಳು ಇರುವುದು ತನಿಖೆಯ ವೇಳೆ ಪತ್ತೆಯಾಗಿದ್ದರಿಂದ ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ.‌ ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜಗ್ಗ ಅಲಿಯಾಸ್ ಜಗದೀಶ್‌, ಬಿಕ್ಲು ಶಿವನ ಕೊಲೆ ಬಳಿಕ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆತ ಬಂಧನವಾದ ಬಳಿಕ ಆತನ ಮೇಲೆಯು ಕೂಡ ರೌಡಿ ಪಟ್ಟಿ ತೆರೆಯಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಆರೋಪಿ ವಿರುದ್ಧ ನಗರದ ಇಂದಿರಾನಗರ, ಜೆಬಿ ನಗರ, ಜೆಪಿ ನಗರ, ಕೆ.ಆರ್ ಪುರ ಸೇರಿದಂತೆ ಹಲವು ಕಡೆ ಪ್ರಕರಣಗಳಿದ್ದು, ಕೆಲವೊಂದು ಕೇಸ್‌ಗಳು ಟ್ರಯಲ್‌ನಲ್ಲಿರುವ ಕಾರಣ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿರುವ ಜಗ್ಗನ ಮೇಲೆ ಮತ್ತೆ ರೌಡಿ ಪಟ್ಟಿ ತೆರೆಯಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ – ಆರೋಪಿ ಜಗ್ಗ ದುಬೈಗೆ ಎಸ್ಕೇಪ್

Share This Article