ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆ ಮುರಿದಿದ್ದಾರೆ. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಎರಡನೇ ವ್ಯಕ್ತಿ ಮೋದಿ.
4,078 ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದ, ಪ್ರಧಾನಿ ಮೋದಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇವತ್ತಿಗೆ 4,078 ದಿನಗಳನ್ನು ಪೂರೈಸಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) 4077 ದಿನಗಳ ಕಾಲ ಪ್ರಧಾನಿ ಆಗಿದ್ದರು. 1966ರ ಜನವರಿ 24 ರಿಂದ 1977ರ ಮಾರ್ಚ್ 24ರ ವರೆಗೆ ಇಂದಿರಾ ಗಾಂಧಿಯವರು 4,077 ದಿನಗಳ ಕಾಲ ಪ್ರಧಾನಿ ಆಗಿದ್ದರು. ಅಲ್ಲದೇ, ಸತತ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿ ಮೋದಿ ದಾಖಲೆ ಬರೆದರೆ, ಮೊದಲ ಸ್ಥಾನದಲ್ಲಿ ಜವಾಹರಲಾಲ್ ನೆಹರೂ ದಾಖಲೆ ಇದೆ. ಇದನ್ನೂ ಓದಿ: Exclusive: ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ – ಸಿಎಂ & ಡಿಸಿಎಂ ವಿಶೇಷಾಧಿಕಾರಿಗಳ ಮಧ್ಯೆ ಜಗಳ
74 ವರ್ಷ ವಯಸ್ಸಿನ ಪ್ರಧಾನಿ ಮೋದಿ, ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಮತ್ತು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಕೂಡ ಆಗಿದ್ದಾರೆ. ಗುಜರಾತ್‌ನಲ್ಲಿ ಜನಿಸಿದ ಬಿಜೆಪಿ ನಾಯಕ, ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಕಾಂಗ್ರೆಸ್ಸೇತರ ನಾಯಕ ನರೇಂದ್ರ ಮೋದಿ.
2002, 2007 ಮತ್ತು 2012 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು 2014, 2019 ಮತ್ತು 2024 ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ಸತತ ಆರು ಚುನಾವಣೆಗಳಲ್ಲಿ ಪಕ್ಷದ ನಾಯಕರಾಗಿ ಗೆದ್ದ ಭಾರತದ ಎಲ್ಲಾ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ಮೋದಿ ಏಕೈಕ ನಾಯಕ ಎಂದು ಬಿಜೆಪಿ ಸಂಭ್ರಮಿಸುತ್ತಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ