ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

Public TV
3 Min Read
Prahlad Joshi 3

– `ಮೆರ್ಕಾಮ್ ಇಂಡಿಯಾ’ ಶೃಂಗಸಭೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ
– ದೇಶದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ತಗ್ಗಿದೆ
– ಪಿಎಂ ಸೂರ್ಯಘರ್ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ನವದೆಹಲಿ: ನವೀಕರಿಸಬಹುದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದ್ದರ ಫಲವಾಗಿ 4 ಲಕ್ಷ ಕೋಟಿ ರೂ. ವೆಚ್ಚ ಉಳಿತಾಯ ಆಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದರು.

ನವದೆಹಲಿಯಲ್ಲಿ (New Dehi) ನಡೆದ `ಮೆರ್ಕಾಮ್ ಇಂಡಿಯಾ’ (the Mercom India) ನವೀಕರಿಸಬಹುದಾದ ಶೃಂಗಸಭೆಯನ್ನು (Renewables Summit 2025) ಉದ್ದೇಶಿಸಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಅಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ. ಈ ಮೂಲಕ ಸುಮಾರು 4 ಲಕ್ಷ ಕೋಟಿ ರೂ. ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ ಕಚೇರಿಯಲ್ಲಿ ನಿತಿನ್‌ ಗಡ್ಕರಿ ಭೇಟಿಯಾದ ಕ್ಯಾ.ಬ್ರಿಜೇಶ್‌ ಚೌಟ

ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಅಧ್ಯಯನದ ಪ್ರಕಾರ ನವೀಕರಿಸಬಹುದಾದ ಇಂಧನದಿAದಾಗಿ ದೇಶದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಿದೆ. 410.9 ಮಿಲಿಯನ್ ಟನ್ CO₂ ಹೊರಸೂಸುವಿಕೆ ಸಹ ತಗ್ಗಿದೆ ಮತ್ತು 31.7 ಬಿಲಿಯನ್ ಡಾಲರ್ ಮೌಲ್ಯದಷ್ಟು ಆರೋಗ್ಯ ಮತ್ತು ವಾಯುಮಾಲಿನ್ಯದಿಂದ ಪ್ರಯೋಜನವಾಗಿದೆ ಎಂದರು. ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

Prahlad Joshi 1 1

33,000 ಕೋಟಿ ರೂ. ಹೂಡಿಕೆ ನಿರೀಕ್ಷೆ:
ಪ್ರಧಾನಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಈಗಾಗಲೇ 17.2 ಲಕ್ಷ ಘಟಕಗಳು ಪೂರ್ಣಗೊಂಡಿವೆ. ಈ ವಲಯದಲ್ಲಿ 30 ಗಿಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS)ಗಾಗಿ 5,400 ಕೋಟಿ ರೂ. ಕಾರ್ಯಸಾಧ್ಯತಾ ಅಂತರ ನಿಧಿ (VGF) ಯೋಜನೆ ಸಹ ಆರಂಭಿಸಲಾಗಿದೆ. ಇದು 33,000 ಕೋಟಿ ರೂ. ಅಷ್ಟು ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.

2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಗ್ರ ಪ್ರಸರಣ ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯುತ್ ಸಚಿವಾಲಯ, ಸಿಇಎ, ಸಿಟಿಯು ಮತ್ತು ಪವರ್‌ಗ್ರಿಡ್‌ನೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಲಾಗಿದೆ. 24,000 ಕೋಟಿ ರೂ. ವೆಚ್ಚದ `ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ (PLI)’ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

Prahlad Joshi 2 1

8.6 ಲಕ್ಷ ಟನ್ ಹಸಿರು ಹೈಡ್ರೋಜನ್‌ಗೆ ಅನುಮೋದನೆ:
ಎಂಎಸ್‌ಎಂಇ ಮತ್ತು ನವೋದ್ಯಮಗಳಿಗೆ ಶುದ್ಧ ಇಂಧನ ನಾವೀನ್ಯತೆಗಾಗಿ ಅಧಿಕಾರ ನೀಡಲಾಗುತ್ತಿದೆ. ಅಲ್ಲದೇ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ 19,744 ಕೋಟಿ ರೂ. ವೆಚ್ಚ, 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಹಂಚಿಕೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್‌ಗೂ ಹೆಚ್ಚು ಹಸಿರು ಹೈಡ್ರೋಜನ್ ಉತ್ಪಾದನೆ ಅನುಮೋದನೆಯೊಂದಿಗೆ ವೇಗದ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ತನ್ನ ಬದ್ಧತೆ ಪೂರೈಸುತ್ತಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯತ್ತ ಸಾಗಿದೆ. ಕಾಲಮಿತಿಗಿಂತ 5 ವರ್ಷ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಿದೆ. ಪ್ರಸ್ತುತ 245 ಗಿಗಾವ್ಯಾಟ್ ಮೀರಿದೆ. 116 ಗಿಗಾವ್ಯಾಟ್ ಸೌರ ವಿದ್ಯುತ್ ಮತ್ತು 52 ಗಿಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆ ಸಹ ಸಾಧಿಸಲಾಗಿದೆ ಎಂದು ವಿವರಿಸಿದರು.

Share This Article