ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

Public TV
2 Min Read
Biklu Shiva

– ಹತ್ಯೆಗೆ ಹೋಟೆಲ್‌ನಲ್ಲೇ ನಡೆದಿತ್ತು ಪ್ಲ್ಯಾನ್‌; 2 ಗಂಟೆ 38 ನಿಮಿಷ ಮಾತುಕತೆ
– ಹತ್ಯೆಗೂ ಮುನ್ನ ಭರ್ಜರಿ ಬಾಡೂಟ

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (Biklu shiva) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಎ1 ಆರೋಪಿ ಜಗ್ಗ @ ಜಗದೀಶ್‌ (Jagga) ಕುರಿತು ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಹೌದು. ಬಿಕ್ಲು ಶಿವನ ಹತ್ಯೆಯಾದ ಕೇವಲ ಹದಿನೈದೇ ನಿಮಿಷಕ್ಕೆ ಜಗ್ಗ ಮನೆಯಿಂದ ಎಸ್ಕೇಪ್‌ ಆಗಿದ್ದಾನೆ ಅನ್ನೋದು ಸಿಸಿಟಿವಿ ದೃಶ್ಯವಾಳಿಯಿಂದ ಬೆಳಕಿಗೆ ಬಂದಿದೆ. ಅಂದು ರಾತ್ರಿ 8 ಗಂಟೆಗೆ ಶಿವಪ್ರಕಾಶ್‌ನ ಕೊಲೆಯಾಗಿದೆ. ರಾತ್ರಿ 8:15 ಗಂಟೆಗೆ ಜಗ್ಗ ಮನೆಯಿಂದ ಎಸ್ಕೇಪ್‌ ಆಗಿದ್ದಾನೆ. ತನ್ನ ಆಡಿ ಕಾರ್‌ ಮೂಲಕ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ ನಿಂದ ನೇರ ಚೆನೈಗೆ ಎಸ್ಕೇಪ್ ಆಗಿದ್ದಾನೆ. ಜಗ್ಗ ಮನೆಯಿಂದ ಎಸ್ಕೇಪ್‌ ಆಗುತ್ತಿರುವ ಎಕ್ಸ್‌ಕ್ಲೂಸಿವ್‌ ಸಿಸಿಟಿವಿ ದೃಶ್ಯಾವಳಿ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

Biklu Shiva 2

ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ಜಗ್ಗನನ್ನ ಪತ್ತೆಹಚ್ಚಲು ತನಿಖಾ ತಂಡ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಇದನ್ನೂ ಓದಿ: Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್‌ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ

2 ಗಂಟೆ 38 ನಿಮಿಷ – ಹೋಟೆಲ್‌ನಲ್ಲಿ ನಡೆದಿತ್ತು ಪ್ಲ್ಯಾನ್‌
ಇನ್ನೂ ಬಿಕ್ಲು ಶಿವ ಹತ್ಯೆಗೂ ಮುನ್ನ ಹಂತಕರು ಹೋಟೆಲ್‌ನಲ್ಲಿ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದರು ಅನ್ನೋದು ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ. ಕಿರಣ್‌ ಸಾರಥ್ಯದಲ್ಲಿ ಹೋಟೆಲ್‌ಗೆ ಬಂದಿದ್ದ ಹಂತಕರು ಸುಮಾರು 2 ಗಂಟೆ 38 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಇಲ್ಲಿಯೇ ಶಿವನ ಹತ್ಯೆಗೆ ಪ್ಲ್ಯಾನ್‌ ನಡೆದಿತ್ತು. ಹತ್ಯೆ ಬಳಿಕ ಹೇಗೆ ಎಸ್ಕೇಪ್‌ ಆಗಬೇಕು? ಅನ್ನೋ ಮಾತುಕತೆಯೂ ಆಗಿತ್ತು ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೆಲ್ಲದರ ಎಕ್ಸ್‌ಕ್ಲೂಸಿವ್‌ ದೃಶ್ಯಾವಳಿಗಳು ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

ಬಂಧಿತ ಹಂತಕರಲ್ಲಿ ಕಿರಣ್, ಮದನ್ ಪ್ರದೀಪ್, ವಿಮಲ್, ಸೇರಿ ಒಟ್ಟು 9 ಮಂದಿ ಒಂದೇ ಟೇಬಲ್‌ನಲ್ಲಿ ಕೂತು ಪ್ಲ್ಯಾನ್‌ ಮಾಡಿದ್ದರು. ಸಂಜೆ 4 ಗಂಟೆಗೆ ಹೋಟೆಲ್‌ಗೆ ಎಂಟ್ರಿ ಆಗಿದ್ದ ಹಂತಕರು 2 ಗಂಟೆಗೂ ಹೆಚ್ಚುಕಾಲ ಒಂದೇ ಟೇಬಲ್‌ನಲ್ಲಿ ಕೂತು ಸ್ಕೆಚ್‌ ಹಾಕಿದ್ದರು. ಮೆನು ತರಿಸಿಕೊಂಡು ಭರ್ಜರಿ ಊಟ ಕೂಟ ಮಾಡಿದ್ದರು ಅನ್ನೋ ತನಿಖಾಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ – ಬೈಂದೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ 

Share This Article