ಭೀಮ ಖ್ಯಾತಿಯ ಜಯ ಸೂರ್ಯ ನಟನೆಯ `ದಿ ಟಾಸ್ಕ್’ ಚಿತ್ರೀಕರಣ ಮುಕ್ತಾಯ

Public TV
1 Min Read
The Task Movie

ಈ. ರಾಮಣ್ಣ ಮತ್ತು ವಿಜಯ್ ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ದಿ ಟಾಸ್ಕ್ (The Task) ಚಿತ್ರದ ಮುಹೂರ್ತ 2024ರ ನವೆಂಬರ್ ತಿಂಗಳಿನಲ್ಲಿ ನಡೆಯಿತು. ಡಿಸೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭ ಮಾಡಿದ ಚಿತ್ರತಂಡ, ಬೆಂಗಳೂರು ಮತ್ತು ಮಡಿಕೇರಿಯ ಸುತ್ತಮುತ್ತ 46 ದಿನಗಳ ಕಾಲ ಚಿತ್ರೀಕರಣವನ್ನು ಪೂರೈಸಿ, ಜುಲೈ 22, 2025 ರಂದು ಬೆಳಗ್ಗೆ 4:30ಕ್ಕೆ ಚಿತ್ರವನ್ನು ಅಂತಿಮವಾಗಿ ಪೂರ್ಣಗೊಳಿಸಿದೆ.

The Task Movie 1

ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ (Raghu Shivamogga) ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಭೀಮ ಸಿನಿಮಾ ಖ್ಯಾತಿಯ ಜಯ ಸೂರ್ಯ ಆರ್ ಅಜಾದ್ , ಪೆಂಟಗನ್ ಸಿನಿಮಾ ಖ್ಯಾತಿಯ ಸಾಗರ್ ರಾಮ್ ಹಾಗೂ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The Task Movie 2

ರಾಘು ಶಿವಮೊಗ್ಗ ಅವರು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಜೊತೆಯಾಗಿ ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಸಂಗೀತಾ ಭಟ್, ಹರಿಣಿ ಶ್ರೀಕಾಂತ್, ತನೀಷಾ ಕುಪ್ಪಂಡ, ಸಂಪತ್ ಮೈತ್ರೇಯ, ಅರವಿಂದ್ ಕುಪ್ಳೀಕರ್, ಕಿರಣ್ ನಾಯ್ಕ್, ಪಿ.ಡಿ ಸತೀಶ್, ಭರತ್ ಜಿ.ಬಿ ಮೊದಲಾದ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಚುರುಕಾಗಿ ನಡೆಯುತ್ತಿದ್ದು, ದಿ ಟಾಸ್ಕ್ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.

Share This Article