ಅಹಮದಾಬಾದ್: ನಕಲಿ ನೋಟು ದಂಧೆ ಹಾಗೂ ಭಯೋತ್ಪಾದನೆಯ ಸಿದ್ಧಾಂತವನ್ನು ಹರಡುತ್ತಿದ್ದ ಅಲ್-ಖೈದಾ (Al-Qaeda )ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ನಾಲ್ವರು ಉಗ್ರರನ್ನು ಗುಜರಾತ್ ಎಟಿಎಸ್ (Gujarat ATS) ಬಂಧಿಸಿದೆ.
ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ ಮತ್ತು ಜೀಶನ್ ಅಲಿ ಬಂಧಿತ ಉಗ್ರರು. ಇಬ್ಬರು ಉಗ್ರರನ್ನು ಗುಜರಾತ್, ಇನ್ನೋರ್ವ ದೆಹಲಿ ಹಾಗೂ ಮತ್ತೋರ್ವ ಉಗ್ರನನ್ನು ನೋಯ್ಡಾದಿಂದ ಬಂಧಿಸಲಾಗಿದೆ. ಈ ನಾಲ್ವರು ಭಯೋತ್ಪಾದಕರು ಸಾಮಾಜಿಕ ಜಾಲತಾಣದ ಅಪ್ಲಿಕೇಶನ್‌ಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು ಎಂದು ಎಟಿಎಸ್ ಡಿಐಜಿ ಸುನಿಲ್ ಜೋಶಿ ತಿಳಿಸಿದರು. ಇದನ್ನೂ ಓದಿ: ಮಾವು ಖರೀದಿ ಮಿತಿ 200 ಕ್ವಿಂಟಾಲ್‌ಗೆ ವಿಸ್ತರಣೆ
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ರೂಪಿಸಲು ಸಂಚು ರೂಪಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ನಾವು ಬಂಧಿಸಿದ್ದೇವೆ. ವಾಟ್ಸಾಪ್ ಮೂಲಕ ಜಿಹಾದಿ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಯುವಕರು ಭಯೋತ್ಪಾದನೆಯಲ್ಲಿ ತೊಡಗುವಂತೆ ಪ್ರಚೋದಿಸುತ್ತಿದ್ದರು. ಅಲ್ಲದೇ ಈ ಕುರಿತು ಯಾವುದೇ ಮಾಹಿತಿ ಸಿಗದಂತೆ ಅಟೋ ಡಿಲೀಟ್ ಆಪ್‌ಗಳನ್ನು ಬಳಸುತ್ತಿದ್ದರು ಎಂದು ಸುನಿಲ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಅಡಿಕೆ ಶೆಡ್ ನಿರ್ಮಾಣ ಮಾಡ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ – ಮೂವರು ದುರ್ಮರಣ