ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು

Public TV
1 Min Read
Yash mother

ನಿರ್ಮಾಪಕಿ ಹಾಗೂ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಇದೇ ಆಗಷ್ಟ್ 1ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೈಲರ್ ಇಂದು ರಿಲೀಸ್ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ ಯಶ್ ಅವರಿಗೆ ಸಿನಿಮಾ ತೋರಿಸಿದ್ದೀರಾ..? ಕೊತ್ತಲವಾಡಿ ಸಿನಿಮಾಗೆ ಯಶ್ ಸಪೋರ್ಟ್ ಮಾಡಲಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದ ಪುಷ್ಪಲತಾ ಇಂದು ಮತ್ತಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

yash mother 1 2

“ಯಶ್‌ಗೆ ಹೇಳದೇ ಏನು ಮಾಡಿಲ್ಲ ಅವನಿಗೂ ಗೊತ್ತು. ಯಶ್ 25ವರ್ಷ ಆದ್ಮೇಲೆ ರಾಕಿಂಗ್ ಸ್ಟಾರ್ ಅಂತಾ ಗೊತ್ತಾಗಿದ್ದು ನಿಮಗೆ. ಅದರ ಹಿಂದೆ ಅವನು ಪಟ್ಟ ಶ್ರಮ ಎಷ್ಟಿದೆ ಅಂತಾ ನಮಗೆ ಗೊತ್ತು. ಅವನೇ ಸಿನಿಮಾ ಪ್ರೊಡಕ್ಷನ್ ಮಾಡಲು ನಮಗೆ ಸ್ಫೂರ್ತಿ. ಮನೇಲಿರೋ ಬಾಸ್ (ಯಶ್) ಸಿನಿಮಾ ಮಾಡೋಕೆ ಸ್ಪೂರ್ತಿ” ಎಂದಿದ್ದಾರೆ. ಇನ್ನೂ ಮುಂದುವರೆದು “ಸಿನಿಮಾ ಜನಕ್ಕೆ ಇಷ್ಟ ಆಗಲಿ ಗೆಲ್ಲಲಿ ಆಗ ಅವನು ಖುಷಿ ಪಡ್ತಾನೆ, ಅವನು ಬಂದು ಸಿನಿಮಾ ನೋಡ್ತಾನೆ” ಎಂದಿದ್ದಾರೆ.

ಕೊತ್ತಲವಾಡಿ ಒಂದು ಹಳ್ಳಿಯಲ್ಲಿ ನಡೆಯುವ ಸಿನಿಮಾ. ಹಿಂದೆ ನನ್ನ ಮಗ ಯಶ್ ಕಿರಾತಕ ಸಿನಿಮಾ ಮಾಡಿದ್ದನ್ನ ಈಗಲೂ ನಮ್ಮೂರಿನ ಜನ ನೆನದುಕೊಳ್ತಾರೆ. ಆ ಬಗ್ಗೆ ಈಗಲೂ ಮಾತಾಡಿಕೊಳ್ತಾರೆ. ಹಾಗೆ ಈ ಕೊತ್ತಲವಾಡಿ ಸಿನಿಮಾ ಕೂಡಾ ಇಷ್ಟವಾಗಲಿದೆ ಎಂದಿದ್ದಾರೆ. ಈ ಸಿನಿಮಾದ ನಂತರ ನಟ ಶರಣ್ ಅವರಿಗೆ ಸಿನಿಮಾ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿರುವ ಮಾಹಿತಿ ಹಂಚಿಕೊಂಡಿದ್ದಾರೆ.

yash mother

ಕೊತ್ತಲವಾಡಿ ಸಿನಿಮಾದಲ್ಲಿ ಯಶ್ ಸರ್ಪ್ರೈಸ್‌ ಎಂಟ್ರಿಕೊಟ್ಟಿದ್ದಾರೆ. ಹೌದು, ಸಿನಿಮಾದಲ್ಲಿ ನಾಯಕಿ ಕಾವ್ಯ ಶೈವ ರಾಕಿಂಗ್‌ಸ್ಟಾರ್ ಯಶ್ ಅವರ ಅಪ್ಪಟ ಅಭಿಮಾನಿಯಾಗಿರುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಯಶ್ ಅವ್ರ ಸಿನಿಮಾದ ದೃಶ್ಯ ಬಳಸಿಕೊಳ್ಳಲಾಗಿದೆ. ಇದು ನಿರ್ದೇಶಕ ಪ್ಲ್ಯಾನ್‌ ಎಂದು ಹೇಳಿದ್ದಾರೆ.

Share This Article