ಪೈಪ್ ಮೇಲಿಂದ ತುಂಗಭದ್ರಾ ಕಾಲುವೆ ದಾಟುವಾಗ ಬಾಲಕಿ ನೀರುಪಾಲು

Public TV
1 Min Read
Koppal Girl falls intoTungabhadra canal

ಕೊಪ್ಪಳ: ಪೈಪ್ ಮೇಲಿಂದ ತುಂಗಭದ್ರಾ ಎಡದಂಡೆ ಕಾಲುವೆ ದಾಟಲು ಹೋಗಿ ಬಾಲಕಿಯೊಬ್ಬಳು ನೀರುಪಾಲಾದ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಕರೆಕಲ್ ಕ್ಯಾಂಪ್ ಬಳಿ ನಡೆದಿದೆ.

ಬಾಲಕಿಯನ್ನು ಚೈತ್ರಾ ಯಾದವ್(13) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

ಕಾಲುವೆ ಎಡಭಾಗದಲ್ಲಿ ಬಾಲಕಿಯ ಪಾಲಕರು ಕುರಿಯ ಹಟ್ಟಿಯನ್ನು ಹಾಕಿಕೊಂಡಿದ್ದರು. ಕಾಲುವೆಗೆ ಅಡ್ಡಲಾಗಿ ಹಾಕಿರುವ ಪೈಪ್ ಮೂಲಕ ಕಾಲುವೆಯ ಬಲಭಾಗಕ್ಕೆ ಬಂದು, ತಮ್ಮ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಬಾಲಕಿಯು ಪೈಪ್ ಮೇಲಿಂದ ಕಾಲುವೆ ದಾಟಲು ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ, ಎಡದಂಡೆ ಕಾಲುವೆಗೆ ಬಿದ್ದಿದ್ದಾಳೆ.

ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಬಾಲಕಿಯು ಹರಿದುಕೊಂಡು ಹೋಗಿದ್ದಾಳೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ

Share This Article