ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನ (Biklu Shiva Murder Case) ಪ್ರಮುಖ ಆರೋಪಿ ಜಗ್ಗ ತಲೆಮರೆಸಿಕೊಂಡಿದ್ದಾನೆ. ಊರು ಬಿಟ್ಟು ವಾರ ಕಳೆದರೂ ಕೂಡ ಆರೋಪಿಯ ಸುಳಿವಿಲ್ಲ.
ರಾಜ್ಯ ಬಿಟ್ಟಿರುವ ಆರೋಪಿ ದೇಶವನ್ನು ತೊರೆಯುವ ಭಯ ತನಿಖಾಧಿಕಾರಿಗಳಿಗೆ ಇದೆ. ಹೀಗಾಗಿ ತಲೆಮರೆಸಿಕೊಳ್ಳುವುದನ್ನು ತಪ್ಪಿಸುವುದಕ್ಕೆ ಜಗ್ಗನ ವಿರುದ್ಧ ಲುಕೌಟ್ ನೋಟಿಸ್ (Lookout Notice) ಜಾರಿ ಮಾಡಲು ತಯಾರಿಯನ್ನು ನಡೆಸಿದೆ. ಇದನ್ನೂ ಓದಿ: 5,000 ರೂ. ಚಾಲೆಂಜ್ ಮಾಡಿ ನದಿಗೆ ಹಾರಿದ್ದ ಯುವಕನ ವಿರುದ್ಧ FIR
ಈಗಾಗಲೇ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದುಕೊಂಡಿರೋ ಪೊಲೀಸರು ಜಗ್ಗನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಲೆಯಾದ ದಿನ ಕುಟುಂಬ ಸಮೇತವಾಗಿ ಎಸ್ಕೇಪ್ ಆಗಿರೋ ಜಗ್ಗ @ ಜಗದೀಶ್‌ಗೆ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ ಸ್ಪಷ್ಟನೆ
ಇನ್ನು ಪ್ರಕರಣ ಸಂಬಂಧ ಎ1 ಜಗದೀಶ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 29ನೇ ಎಸಿಎಂಎಂ ಕೋರ್ಟ್ ಜುಲೈ 24ಕ್ಕೆ ಮುಂದೂಡಿಕೆ ಮಾಡಿದೆ. ಇದನ್ನೂ ಓದಿ: ಐತಿಹಾಸಿಕ ತಪ್ಪುಗಳನ್ನು ಪಠ್ಯಪುಸ್ತಕಗಳು ಮರೆಮಾಚಿವೆ – ಪವನ್ ಕಲ್ಯಾಣ್ ಟೀಕೆ