5,000 ರೂ. ಚಾಲೆಂಜ್ ಮಾಡಿ ನದಿಗೆ ಹಾರಿದ್ದ ಯುವಕನ ವಿರುದ್ಧ FIR

Public TV
1 Min Read
Madikeri who challenged of 5000 and jumped into river

ಮಡಿಕೇರಿ: ಸ್ನೇಹಿತನ ಜೊತೆ 5 ಸಾವಿರ ರೂ. ಚಾಲೆಂಜ್ ಮಾಡಿ ನದಿಗೆ ಹಾರಿದ್ದ ಯುವಕನ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.ಇದನ್ನೂ ಓದಿ: ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ ಸ್ಪಷ್ಟನೆ

ಹೌದು, ಮಡಿಕೇರಿ (Madikeri) ತಾಲೂಕಿನ ಕಕ್ಕಬೆ ಗ್ರಾಮದಲ್ಲಿ ಕಳೆದ ಶನಿವಾರ ಕೆಲ ಯುವಕರು ನದಿಗೆ ಹಾರಿ ಇಂತಿಷ್ಟು ಸಮಯದಲ್ಲಿ ದಡ ಸೇರಿದರೆ 5,000 ರೂ. ಹಾಗೂ ಶೂ ಕೊಡಿಸುವುದಾಗಿ ಸವಾಲು ಹಾಕಿದ್ದರು. ಯುವಕನನ್ನು ಕುಂಜಿಲ ಗ್ರಾಮದ ಎಂ.ಎನ್. ಸಲ್ಮಾನ್ ಎಂದು ಗುರುತಿಸಲಾಗಿದ್ದು, ಇದನ್ನೇ ಗಮನಿಸಿ ಸ್ನೇಹಿತರ ಸವಾಲು ಸ್ವೀಕರಿಸಿ, ಉಕ್ಕಿ ಹರಿಯುತ್ತಿದ್ದ ನದಿಗೆ ಹಾರಿ ದಡ ಸೇರಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಹಿನ್ನೆಲೆ ಪೊಲೀಸರು ನದಿಯಲ್ಲಿ ದುಸ್ಸಾಹಸ ಮಾಡಿದ ಯುವಕನ ವಿರುದ್ಧ ಬಿಎನ್‌ಎಸ್ 2023ರ ಸೆಕ್ಷನ್ 125 ಅಡಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಕ್ಕಬ್ಬೆ ಸೇತುವೆ ಮೇಲಿನಿಂದ ನದಿಗೆ ಹಾರಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಐತಿಹಾಸಿಕ ತಪ್ಪುಗಳನ್ನು ಪಠ್ಯಪುಸ್ತಕಗಳು ಮರೆಮಾಚಿವೆ – ಪವನ್ ಕಲ್ಯಾಣ್ ಟೀಕೆ

Share This Article