ಸೈಲೆಂಟಾಗೇ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಹೊಸ ಸಿನಿಮಾ ಪ್ಲ್ಯಾನ್ ಆಗಿದೆ, ಟೀಮ್ ಕೂಡ ರಿವೀಲ್ ಆಗಿದೆ. ಇನ್ನುಳಿದ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದ್ದು, ಉಪೇಂದ್ರಗೆ ಈ ಬಾರಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರವನ್ನು ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ (Tarun Shivappa) ನಿರ್ಮಿಸುತ್ತಿದ್ದಾರೆ. ಈ ನಯಾ ಕಾಂಬಿನೇಶನ್ ಆರಂಭದಲ್ಲೇ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್
ಸದ್ಯಕ್ಕೀಗ ಉಪೇಂದ್ರ, ಸೂರಪ್ಪ ಬಾಬು ನಿರ್ಮಾಣದ ನಾಗಣ್ಣ ನಿರ್ದೇಶನದಲ್ಲಿ ʻಭಾರ್ಗವʼ ಚಿತ್ರದಲ್ಲಿ ತೊಡಗಿದ್ದು ಇದರ ಶೂಟಿಂಗ್ ಮುಗಿದ ಬಳಿಕ ಹೊಸ ಸಿನಿಮಾ ಪ್ರಾರಂಭಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು
ಹಲವು ದಿನಗಳಿಂದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಉಪ್ಪಿ ನಟಿಸುವ ಸುದ್ದಿ ಇತ್ತು. ಇದೀಗ ನಿರ್ಮಾಣ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದ್ದು ಚಿತ್ರಕ್ಕೆ ಶೀರ್ಷಿಕೆಯೇ ಮುಖ್ಯ ಆಕರ್ಷಣೆ ಆಗಿದೆ. ಚಿತ್ರಕ್ಕೆ ʻನೆಕ್ಸ್ಟ್ ಲೆವೆಲ್ʼ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಇನ್ನಷ್ಟು ಸೀಕ್ರೆಟ್‌ಗಳನ್ನ ಹಂತಹಂತವಾಗಿ ರಿವ್ಹೀಲ್ ಮಾಡುವ ಸುದ್ದಿ ಕೊಟ್ಟಿದೆ ಚಿತ್ರತಂಡ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು