CBSE ಯಿಂದ ಸೇಫ್ಟಿ ಗೈಡ್‌ಲೈನ್ಸ್ ‌- ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲಕಡೆ ಆಡಿಯೋವಿಶುವಲ್ ಸಿಸಿಟಿವಿ ಕಡ್ಡಾಯ

Public TV
School CCTV 2

ನವದೆಹಲಿ: ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಮಾರ್ಗಸೂಚಿಯನ್ನ ಬಿಡುಗಡೆಗೊಳಿಸಿದೆ. ಈ ಉಪಕ್ರಮದ ಭಾಗವಾಗಿ ತನ್ನೆಲ್ಲಾ ಅಂಗಸಂಸ್ಥೆಯ ಶಾಲೆಗಳಲ್ಲಿ ಹೈ-ರೆಸಲ್ಯೂಶನ್ (ಉತ್ತಮ ಗುಣಮಟ್ಟದ) ಆಡಿಯೋವಿಶುವಲ್‌ ರೆಕಾರ್ಡಿಂಗ್‌ ಸಾಮರ್ಥ್ಯದ ಸಿಸಿಟಿವಿ ಕ್ಯಾಮೆರಾಗಳನ್ನ (CCTV Cameras) ಅಳವಡಿಸಲು ನಿರ್ದೇಶನ ನೀಡಿದೆ.

ವಿದ್ಯಾರ್ಥಿಗಳು (School Students) ಮತ್ತು ಶಾಲಾ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದ ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದೆ. ಅಲ್ಲದೇ ಕನಿಷ್ಠ 15 ದಿನಗಳವರೆಗೆ ರೆಕಾರ್ಡಿಂಗ್‌ ಸಂಗ್ರಹಿಸುವ ಶೇಖರಣಾ ಸಾಧನಗಳನ್ನ ಹೊಂದಿರಬೇಕು. ಅಗತ್ಯವಿದ್ದರೆ, ಅಧಿಕಾರಿಗಳು ಅದನ್ನು ಪರಿಶೀಲಿಸಬಹುದು ಎಂದು ಮಂಡಳಿ ಹೇಳಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

School 2

ಎಲ್ಲೆಲ್ಲಿ ಸಿಸಿಟಿವಿ ಅಳವಡಿಕೆ?
ಶೌಚಾಲಯ, ಸ್ನಾನಗೃಹ (ವಾಶ್‌ರೂಮ್‌) ಹೊರತುಪಡಿಸಿ, ಶಾಲೆಗಳ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಲಾಬಿಗಳು, ಕಾರಿಡಾರ್‌ಗಳು, ಮೆಟ್ಟಿಲುಗಳು, ಎಲ್ಲಾ ತರಗತಿ ಕೊಠಡಿಗಳು, ಪ್ರಯೋಗಾಲಯಗಳು (labs), ಗ್ರಂಥಾಲಯ, ಕಾಲೇಜು ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್ ಪ್ರದೇಶ, ಸ್ಟೋರ್‌ರೂಮ್‌, ಆಟದ ಮೈದಾನ, ಇತರ ಸಾಮಾನ್ಯ ಪ್ರದೇಶಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೈ-ರೆಸಲ್ಯೂಶನ್ ಆಡಿಯೋವಿಶುವಲ್‌ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್ 

School CCTV 1

ಅಲ್ಲದೇ 15 ದಿನ ರೆಕಾರ್ಡಿಂಗ್‌ ಉಳಿಸಿಕೊಳ್ಳುವ ಶೇಖರಣಾ ಸಾಧನಗಳನ್ನ ಹೊಂದಿರಬೇಕು. ರೆಕಾರ್ಡಿಂಗ್‌ ಬ್ಯಾಕಪ್‌ ವ್ಯವಸ್ಥೆಯೊಂದಿಗೆ ನಿಯಮಿತವಾಗಿ ನಿರ್ವಹಣೆ ಮಾಡಬೇಕು ಎಂದು ಸಿಬಿಎಸ್‌ಇ ಮಂಡಳಿ ತನ್ನ ಅಂಗಸಂಸ್ಥೆಯ ಶಾಲೆಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

Share This Article