ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

Public TV
1 Min Read
Bidar Prabhu Chauhan son Pratheek Chauhan Case

– ಎಷ್ಟು ಪ್ರೀತಿ ಮಾಡ್ತೀಯಾ ನೋಡೋಣ ಎಂದು ಬ್ಲೇಡ್‌ನಿಂದ ಕೈ ಕಟ್‌ ಮಾಡಿದ್ದ ಎಂದ ಸಂತ್ರಸ್ತೆ
– ವೀಡಿಯೋ ಸಮೇತ ದಾಖಲೆ ಬಿಡುಗಡೆ

ಬೀದರ್: ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರನ ಗಂಭೀರ ಆರೋಪ ಬೆನ್ನಲ್ಲೇ ಇಂದು ಸಂತ್ರಸ್ತೆ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದರು.

ನನಗೆ ನ್ಯಾಯ ಬೇಕು, ನನ್ನ ಜೊತೆ ಆಗಿದ್ದು ಬೇರೆ ಯುವತಿಗೆ ಆಗಬಾರದು. ನನಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ. ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾರ ಜೊತೆಗೂ ಚಾಟಿಂಗ್, ವೀಡಿಯೋ ಕಾಲ್ ಅಲ್ಲಿ ಮಾತಾಡಿಲ್ಲ. ನನ್ನ ಹಾಗೂ ಪ್ರತೀಕ್ (Pratheek Chauhan) ನಡುವೆ ಪ್ರೀತಿ ಇತ್ತು. 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿಯೇ ಇತ್ತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

ನಾನು ಪ್ರತೀಕ್ ಬಿಟ್ಟು ಬೇರೆ ಯುವಕನನ್ನು ಪ್ರೀತಿ ಮಾಡಿಲ್ಲ. ಪ್ರತೀಕ್ ತಪ್ಪು ಮಾಡಿಲ್ಲ ಅಂದರೆ ಏಕೆ ಮುಂದೆ ಬರುತ್ತಿಲ್ಲ, ಅವರ ತಂದೆ ಯಾಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

ಈ ವೇಳೆ ಕೈ ಕಟ್ ಮಾಡಿದ ವಿಡಿಯೋ ಕೂಡಾ ಬಿಡುಗಡೆ ಮಾಡಿದ ಸಂತ್ರಸ್ತೆ, ನೀನು ನನ್ನ ಎಷ್ಟು ಪ್ರೀತಿ ನೋಡೋಣ ಎಂದು ಚೌಹಾಣ್ ಪುತ್ರ ಬ್ಲೇಡ್‌ನಿಂದ ನನ್ನ ಕೈ ಕಟ್ ಮಾಡಿ ಓಡಿ ಹೋಗಿದ್ದಾನೆ. ಪ್ರಭು ಚೌಹಾಣ್, ಇದು ಭಗವಂತ್ ಖೂಬಾ ಪಿತೂರಿ ಎಂದು ಹೇಳಿದ್ದಾರೆ. ನಾನು ಇಲ್ಲಿಯವರೆಗೆ ಖೂಬಾರನ್ನು ನೋಡಿಲ್ಲ. ನಾಗಲಕ್ಷ್ಮಿ ಹಾಗೂ ಎಸ್ಪಿಗೆ ದೂರು ನೀಡಿ ಎಲ್ಲಾ ಹೇಳಿದ್ದು, ನನಗೆ ನ್ಯಾಯ ಸಿಗುತ್ತದೆ ಎಂದರು. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

Share This Article